ಹೇಮಾವತಿ ನಾಲೆ ಅನಾನುಕೂಲತೆಯಿಂದ ಹಲವು ವರ್ಷದಿಂದ ರೈತರು ಯಾವುದೇ ಬೆಳೆ ಮಾಡಿಲ್ಲ

ಹೊಳೆನರಸೀಪುರ ತಾಲೂಕು  ಹಳ್ಳಿ ಮೈಸೂರ್ ಹೋಬಳಿ ದೇವರಗುಡ್ಡೆನಹಳ್ಳಿ ಹತ್ತಿರ ಹಾರನಕಟ್ಟೆ ಬಳಿ ಹೇಮಾವತಿ ನಾಲೆಯಿಂದ ಸುಮಾರು 500-600 ಎಕರೆ ಗೆ ಸರಬರಾಜು ಮಾಡುವ ನೀರಿನ ಪೈಪ್ ಒಡೆದು ಸುಮ್ಮನೆ ಪೋಲ್ ಆಗುತ್ತಿದೆ ಸುಮಾರು 8-10ವರ್ಷದಿಂದ ನೀರಾವರಿ ಇಲಾಖೆಗೆ ದೂರು ಸಲ್ಲಿಸಿದರು ಕೂಡ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಯಾರು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪರಿಹಾರ ನೀಡಿಲ್ಲ ಇದರಿಂದ ದೇವರಗುಡ್ಡೆನಹಳ್ಳಿ ಆನೆಕನ್ನಂಬಾಡಿ ಹಾಗೂ ದಾಸೇಗೌಡನ ಕೊಪ್ಪಲು ಗ್ರಾಮದ ರೈತರಿಗೆ ತುಂಬಾ ಅನಾನುಕೂಲವಾಗಿದ್ದು ಸುಮಾರು 4-5ವರ್ಷದಿಂದ ಆ ಭಾಗದ ರೈತರು ಯಾವುದೇ ಬೆಳೆಯನ್ನು ಬೆಳೆಯಲು ಅನುಕೂಲವಾಗಿಲ್ಲ ಆದ್ದರಿಂದ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ನಾಲೆ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಈ ಮೂಲಕ ಕೇಳಿಕೊಳ್ಳುತೇನೆ ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ ತೋರಿದಲ್ಲಿ ಮೂರು ಗ್ರಾಮದ ಜನರು ನೀರಾವರಿ ಇಲಾಖೆ ಕಚೇರಿ ಬಳಿ ಪ್ರತಿಭಟನೆ ಮಾಡಲಾಗುವುದು.

Post a Comment

Previous Post Next Post