ಮಾಡಾಳು ಗೌರಮ್ಮ ದೇವಿಗೆ ಬಂದ ದಿನವೇ ಬೀಳ್ಕೊಡುಗೆ ನಿರಾಶರಾದ ಭಕ್ತಾದಿಗಳು

ಕೊರೋನಾ ಎಫೆಕ್ಟ್: ಕರ್ಪೂರ ದೇವತೆ ಮಾಡಾಳು ಗೌರಮ್ಮ ದೇವಿಗೆ ಬಂದ ದಿನವೇ ಬೀಳ್ಕೊಡುಗೆ, ನಿರಾಶರಾದ ಭಕ್ತಾದಿಗಳು

 ವರ್ಷದಲ್ಲಿ ಹನ್ನೊಂದು ದಿನಗಳ ಕಾಲ ದರ್ಶನ ನೀಡುತ್ತ ಕರ್ಪೂರ ದೇವತೆಯೆಂದೇ ಪ್ರಸಿದ್ದಿ ಪಡೆದಿರುವ ತಾಲ್ಲೂಕಿನ ಮಾಡಾಳು ಗೌರಮ್ಮ ದೇವಿಯನ್ನ ಕೊರೊನಾ ಸಮಸ್ಯೆ ನಿಮಿತ್ತ ಕೇವಲ ಒಂದು ದಿನವಿಟ್ಟು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ಬೆರಳೆಣಿಕೆ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ವಿಸರ್ಜಿಸಲಾಯಿತು .

 ಮಾಡಾಳು ಗ್ರಾಮದಲ್ಲಿ ಭಾದ್ರಪದ ದಿನದಂದು ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡ ಗೌರಮ್ಮ ದೇವಿಯನ್ನು ... ಸಂಪ್ರದಾಯದಂತೆ ಪೂಜಾ ಕೈಕರ್ಯಗಳು ನಡೆದ ಬಳಿಕ ದೇವಿಯ ಮೂರ್ತಿಯನ್ನ ಹೊರತಂದು ಗ್ರಾಮದಲ್ಲಿ ಕಲ್ಯಾಣಿಯವರೆಗೆ ಮೆರವಣಿಗೆ ನಡೆಸಲಾಯಿತು . 

ಇನ್ನೊಂದೆಡೆ ಕರ್ಪೂರ ಪ್ರಿಯೆಯಾದ ದೇವಿಗೆ ಕಲ್ಯಾಣಿಯ ಸುತ್ತ ಭಕ್ತರು . ಮನದ ಇಷ್ಟಾರ್ಥವನ್ನ ಈಡೇರಿಸುವಂತೆ ಬೇಡುತ್ತಾ ಸಾವಿರಾರು ರೂಪಾಯಿಯ ಕರ್ಪೂರವನ್ನು ಹಚ್ಚುವ ಮೂಲಕ ದೇವಿಗೆ ಸಮರ್ಪಿಸಿದರು . ದಾಸೋಹ , ಮೆರವಣಿಗೆ , ದುಗ್ಗಳ ಸೇವೆಯಿಲ್ಲ : ಪ್ರತಿ ವರ್ಷ ಲಕ್ಷಾಂತರ ಜನರಿಗೆ ದರ್ಶನ ನೀಡುತ್ತಿದ್ದ ಗೌರಮ್ಮ ದೇವರ ದರ್ಶನವಿಲ್ಲ , ಹರಕೆ ಹೊತ್ತ ಭಕ್ತರು ತಮ್ಮ ತಲೆಯ ಮೇಲೆ ದುಗ್ಗಳವನ್ನು ಹೊತ್ತು ಹರಕೆ ತೀರಿಸುತ್ತಿದ್ದರೂ ಅವು ಇಲ್ಲವಾಗಿದೆ . 

2 ದಿನಗಳ ಕಾಲ ಮೆರವಣಿಗೆಯಲ್ಲಿ ಸಾಗುತ್ತಿದ್ದ ಸೇವೆಯೂ ಇಲ್ಲವಾಗಿದ್ದು ಭಕ್ತರಲ್ಲಿ ನಿರಾಶೆಯನ್ನು ಮೂಡಿಸಿದೆ . ಈ ಸಂದರ್ಭದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು , ಸಚಿವ ಮಾಧುಸ್ವಾಮಿ ಕುಟುಂಬ , ಶಾಸಕ ಕೆ.ಎಂ. ಶಿವಲಿಂಗೇಗೌಡ , ಆಡಳಿತ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು .

Post a Comment

Previous Post Next Post