ಹೂವಿನ ಅಲಂಕಾರಿಗಳ ಸಂಘ ಉತ್ತಮ ಕೆಲಸ ಮಾಡಲಿ

 ಬೇಲೂರು: ಶುಭ ಸಮಾರಂಭಗಳಲ್ಲಿ ಹೂವಿನ ಅಲಂಕಾರದ ಮೂಲಕ ಸಮಾರಂಭಕ್ಕೆ ಮೆರುಗು ನೀಡುವ ಅಲಂಕಾರಿಗಳು ಶ್ರೀ ಚನ್ನಕೇಶವಸ್ವಾಮಿ ಹೆಸರಿನಲ್ಲಿ ಹೂವಿನ ಅಲಂಕಾರಿಗಳ ಸಂಘ ಸ್ಥಾಪಿಸಿ ಉತ್ತಮ ಕೆಲಸಗಳನ್ನು ಮಾಡಲು ಮುಂದಾಗಬೇಕಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.



ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಶ್ರೀ ಚನ್ನಕೇಶವಸ್ವಾಮಿ ಹೂವಿನ ಅಲಂಕಾರಿಗಳ ಸಂಘದಿಂದ ಗುರುವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ತರಹದ ಶುಭ ಸಮಾರಂಭಗಳಲ್ಲಿ ಅಲಂಕಾರವಿಲ್ಲದೆ ಕಾರ್ಯಕ್ರಮ ನಡೆಯುವುದಿಲ್ಲ. ನಿಮ್ಮ ಅಲಂಕಾರದಿಂದ ಶುಭ ಸಮಾರಂಭಗಳಿಗೆ ಕಳೆ ಕಟ್ಟುತ್ತವೆ. ನಿಮ್ಮದೇ ಆದ ಸಂಘ ಕಟ್ಟಿಕೊಂಡು ನಿಮ್ಮ ಅಗತ್ಯತೆಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ಪುರಸಭೆಯಿಂದ ಬಡವರಿಗೆ ನಿವೇಶನ ಕೊಡಲು ಮುಂದಾಗಿದ್ದು, ಜೂನಿಯರ್ ಕಾಲೇಜು ಹಿಂಭಾಗದವರಿಗೆ ಕೊಟ್ಟ ನಂತರ ಉಳಿದ ನಿವೇಶನಗಳನ್ನು ವಿತರಿಸುವ ಸಂದರ್ಭ ಅಲಂಕಾರಿಕ ಸಂಘದ ಸದಸ್ಯರನ್ನೂ ಪರಿಗಣಿಸಲಾಗುವುದು ಎಂದರು.

ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ಮಾತನಾಡಿ, ಹೂವಿನ ಅಲಂಕಾರಿಕ ಸಂಘದ ಸದಸ್ಯರು ಸರ್ಕಾರದ ಕಾರ್ಮಿಕ ಇಲಾಖೆ ಮೂಲಕ ವಿತರಿಸುವ ಸೌಲಭ್ಯಗಳನ್ನು ಪಡೆದುಕೊಳ್ಳುವತ್ತ ಮುಂದಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗಿ ಎಂದರು.

ಪುರಸಭೆ ಸದಸ್ಯ ಜಮಾಲ್ಲುದ್ದೀನ್ ಮಾತನಾಡಿದರು. ಉದ್ಯಮಿ, ಸಿನಿಮಾ ನಿರ್ಮಾಪಕ ಎನ್.ಆರ್.ಸಂತೋಷ್, ಪರಿಸರ ಪ್ರೇಮಿ ಬಳ್ಳೂರು ಉಮೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಕಾಂಗ್ರೆಸ್ ಮುಖಂಡ ಬಿ.ಎಂ.ಸಂತೋಷ್, ಪುರಸಭೆ ಸದಸ್ಯ ಬಿ.ಸಿ.ಜಗದೀಶ್, ಕರವೇ ಅಧ್ಯಕ್ಷ ಚಂದ್ರಶೇಖರ್, ಚನ್ನಕೇಶವಸ್ವಾಮಿ ಹೂವಿನ ಅಲಂಕಾರಿಕ ಸಂಘದ ಅಧ್ಯಕ್ಷ ಬಿ.ಎಲ್.ರಾಜು, ಗೌರವಾಧ್ಯಕ್ಷ ಇಂದ್ರೇಶ್, ಉಪಾಧ್ಯಕ್ಷ ಅಶೋಕ್, ರಾಮ ನಾಯಕ್, ಪ್ರಧಾನ ಕಾರ್ಯದರ್ಶಿ ಗಣೇಶ್, ಖಜಾಂಚಿ ರಂಗಸ್ವಾಮಿ, ಕುಮಾರ್ ನಾಯಕ್, ರಕ್ಷಿತ್, ಅತೀಖ್ ಇತರರಿದ್ದರು.

Post a Comment

Previous Post Next Post