ಹಾಸನ ಹೈಸ್ಕೂಲ್ ಫೀಲ್ಡ್ ಮಿನಿ ಕ್ರೀಡಾಂಗಣ ವಾಗುತ್ತದ?

 
ಹಾಸನ ನಗರದ ಹೃದಯ ಭಾಗದಲ್ಲಿರುವ  ಇತಿಹಾಸ ಪ್ರಸಿದ್ದ ಹೈಸ್ಕೂಲ್ ಮೈದಾನ ಹಾಸನ ನಗರದ ಅತಿ ದೊಡ್ಡ ಮೈದಾನವಾಗಿತ್ತು ಸುಮಾರು 20 ಎಕರೆಯಷ್ಟು ವಿಸ್ತಾರವಾಗಿದ್ದ ಹುಲ್ಲಿನ ಹಾಸಿನ ಮೈದಾನ.ಮೈದಾನದ ಮದ್ಯೆ ಎತ್ತರವಾದ ಸ್ಟೇಜ್ ರಾಜಕೀಯ ಪಕ್ಷದ ರಾಷ್ಟ್ರೀಯ  ನಾಯಕರುಗಳ ಬಾಷಣ ಮಾಡಿದ ಮೈದಾನ. ಅವಾಗಿನ್ನು ಜಿಲ್ಲಾ ಕ್ರೀಡಾಂಗಣ ಆಗಿರಲಿಲ್ಲ ಆದ್ದರಿಂದ ಹೈಸ್ಕೂಲ್ ಮೈದಾನ ಹಾಸನಕ್ಕೆ ಇದ್ದ ಒಂದೇ ಮೈದಾನ. ಹೆಸರಾಂತ  ಪುಟ್ಬಾಲ್ ತಂಡವಾದ ಯಂಗಬಾಯ್ಸ ಸಂತೋಷ ಕ್ಲಬ್  ಲೆದರ್ ಬಾಲ್ ಕ್ರಿಕೆಟಿನ ಹೆಸರಾಂತ ತಂಡಗಳಾದ ಸಿ.ಸಿ.ಹೆಚ್. ಸೋಬರ್ಸ್ ವೀನಸ್ ತಂಡಗಳು ಒಮೇಗಾ ಬಾಸ್ಕೆಟ್‌ಬಾಲ್ ಕ್ಲಬ್ , ವಾಲಿಬಾಲ್ ,ಕುಸ್ತಿ,ಜಿಮ್ನಾಸ್ಟಿಕ್ ಖೋ-ಖೋ ಕಬ್ಬಡಿ ಅಥ್ಲೆಟಿಕ್, ಗಿಲ್ಲಿದಾಂಡು ಆಟಗಳನ್ನು ಸಾವಿರಾರು ಜನ ಇದೇ ಮೈದಾನದಲ್ಲಿ ಆಡುತ್ತಿದ್ದರು.ಪ್ರತಿನಿತ್ಯ ಅಭ್ಯಾಸ ಮಾಡುವ ತಂಡಗಳ ಬಿಟ್ಟು  ಬೇರೆ  ತಂಡಗಳಿಗೆ ಜಾಗವಿರಲಿಲ್ಲ .ಪ್ರತಿದಿನ ನೂರಾರು ಜನರು ಬೇರೆ ಬೇರೆ ಆಟಗಳನ್ನು ಆಡುವುದನ್ನು ನೋಡಲು ಬರುತ್ತಿದ್ದ ವಯೋವೃದ್ದರು ಹೆಂಗಸರು ಮಕ್ಕಳಿಗೆ ಸಂತೋಷಗೊಂಡು ವಾಕಿಂಗ್ ಮಾಡುತ್ತಿದ್ದರು. ಶನಿವಾರ ಭಾನುವಾರವಾದರೆ ಕ್ರಿಕೇಟ್ ಟೂರ್ನಮೆಂಟ್ ಪಿಕ್ಸಸ್. ಯಾವಾಗ ಹಾಸನಕ್ಕೆ ಮೆಡಿಕಲ್ ಕಾಲೇಜ್ ಮಂಜೂರು ಆಯಿತು ಅಂದಿನಿಂದ ಮೈದಾನಕ್ಕೆ ಗ್ರಹಣ ಒಕ್ಕರಿಸಿತು.ಹಾಸನ ನಗರದಲ್ಲಿ ಬೇರೆ ಖಾಲಿ ಸರ್ಕಾರದ ಜಾಗವಿದ್ದರು ಸರ್ಕಾರಿ ಆಸ್ಪತ್ರೆ ಜೊತೆಯಲ್ಲೇ ಕಾಲೇಜು ಇರಬೇಕು ಎನ್ನುವ ಮಾನದಂಡ ಇಟ್ಟುಕೊಂಡು ಮುಂದಾಲೋಚನೆಯಿಲ್ಲದೆ ತಮ್ಮ ಸ್ವಹಿತಾಸಕ್ತಿಗೆ ಕೆಲವು ರಾಜಕೀಯ ಪಕ್ಷದ ನಾಯಕರು ಇತಿಹಾಸ ಪ್ರಸಿದ್ದ ಮೈದಾನ ಹಾಳು ಮಾಡಿದರು.ನಾವೆಲ್ಲರು ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ.ಕೆಲ ರಾಜಕೀಯ ನಾಯಕರಿಗೆ ಆಟ ಹಾಗು ಆಟದ ಮೈದಾನ ಬಗ್ಗೆ ನಿರ್ಲಕ್ಷ ಭಾವನೆ ,ಅವರು ಆಡೋದಿಲ್ಲ ಬೇರೆಯವರಿಗು ಆಡಲು ಬಿಡೊದಿಲ್ಲ.ಮೆಡಿಕಲ್ ಕಾಲೇಜ್  ಅರ್ಧ ಮೈದಾನ ನುಂಗಿತು ಉಳಿದ ಜಾಗದಲ್ಲೇ ವಾಕಿಂಗ್ ಹಾಗು ಆಟ ಆಡಿಕೊಂಡು ಆರೊಗ್ಯ ಕಾಪಡಿಕೊಂಡು ಸಾರ್ವಜನಿಕರು ನೆಮ್ಮದಿಯಿಂದ ಇದ್ದರು.ಆದರೆ ಕಳೆದ 3-4  ವರ್ಷದ ಹಿಂದೆ ಗಂಧದ ಕೋಟೆ ಎಂಬ ಸಣ್ಣದೊಂದ ವನ ಹೈಟೆಕ್ ಆಸ್ಪತ್ರೆ ಕಟ್ಟುವ ನೆಪದಲ್ಲಿ ಆ ವನದ ನೂರಾರು ದೊಡ್ಡ ಮರಗಳ ಮರಣ ಹೋಮ ನೆಡೆಯಿತು. ಪ್ರತಿಭಟನೆ ಮಾಡಿದರು ಪ್ರಯೋಜನವಾಗಲಿಲ್ಲ.ಹೈಟೆಕ್ ಆಸ್ಪತ್ರೆ ಕಟ್ಟಡ ಕಟ್ಟುವದಕ್ಕೆ ಮಣ್ಣನ್ನು ತೆಗೆದು ಆ ಮಣ್ಣನ್ನು ಹೈಸ್ಕೂಲ್ ಮೈದಾನ ದಲ್ಲಿ ಹಾಕಿದರ ಪರಿಣಾಮವಾಗಿ ಮಣ್ಣಿನ ಬೆಟ್ಟವೇ ನಿರ್ಮಾಣಗೊಂಡು ಮೈದಾನ ಸಂಪೂರ್ಣ ಮುಚ್ಚಿಕೊಂಡಿತು.ವಾಕಿಂಗ್ ಮಾಡುಲು ಆಟ ಆಡಲು ಸ್ವಲ್ಪವು ಜಾಗ ಉಳಿಯಲಿಲ್ಲ ಇವರ ಗೋಳನ್ನು ಯಾರು ಕೇಳಲಿಲ್ಲ. ಹೀಗಿರುವಾಗ ಆ ಮೈದಾನದಲ್ಲಿ ದಿನನಿತ್ಯ ವಾಕಿಂಗ್ ಮಾಡುತ್ತಿದ್ದ ಹಾಗು ಪುಟ್ಬಾಲ್ ಆಡುತ್ತಿದ್ದ ಆಟಗಾರರು ಮಾನ್ಯ ಶಾಸಕರಾದ ಪ್ರೀತಂ ಗೌಡ ರವರ ಬಳಿ ಮೈದಾನದ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿ ಶಾಸಕರು ಆ ಕೂಡಲೆ ಸಂಭಂದಪಟ್ಟ ಅಧಿಕಾರಿಗಳಗೆ ಮೈದಾನದಲ್ಲಿರುವ ಮಣ್ಣಿನ ಬೆಟ್ಟವನ್ನು ತಕ್ಷಣ ಖಾಲಿ ಮಾಡಿ ಆಟ ವಾಡಲಿಕ್ಕೆ ಅನುಕೂಲ ಮಾಡಿಕೊಡಬೇಕಾಗಿ ತಿಳಿಸಿದರು.ಇದಾದ ಒಂದು ವಾರದಲ್ಲಿ ಮೈದಾನದಲ್ಲಿದ್ದ ಮಣ್ಣು ತೆಗೆದು ಈಗ ವಾಕಿಂಗ್ ಮಾಡುವುದಕ್ಕೆ ಅನುಕೂಲ ಮಾಡಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣ ಒರತು ಪಡಿಸಿ ಏಕೈಕ ಕ್ರೀಡಾ ತಾಣ ಹೈಸ್ಕೂಲ್ಫೀ ಲ್ಡ್ ಸಾರ್ವಜನಿಕರಿಗೆ ಮತ್ತೆ ಮುಂಜಾನೆ  ಮುಸ್ಸಂಜೆ ವಾಕಿಂಗ್ , ಜಾಗಿಂಗ್ ಹಾಗೂ ಆಟೋಟಗಳಿಗೆ ಮುಕ್ತವಾಗಿ ಅವಕಾಶ ವಾಗಿದ್ದು. ಈ ಹಿಂದೆ ಸರ್ಕಾರಿ ಆಸ್ಪತ್ರೆ ಗಳ ಕಾಮಗಾರಿ ನಿಮಿತ್ತ ಮಣ್ಣು ಸುರಿಯಲಾಗಿತ್ತು ಈಗ ಅದನ್ನು ತೆಗೆದು ಹಾಕಲಾಗಿದೆ. ಈ ಒಂದು ಸ್ಥಳವನ್ನ ಉತ್ತಮ ರೀತಿಯ ಮಿನಿ ಕ್ರೀಡಾಂಗಣ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯ.

Post a Comment

Previous Post Next Post