ಹಾಸನದಲ್ಲಿ ಮತ್ತೊಂದು ಕೋವಿಡ್ ಸಾವು .ಮೃತರ ಸಂಖ್ಯೆ 7ಕ್ಕೆ ಏರಿಕೆ

‌ಹಾಸನ: ಜಿಲ್ಲೆಯಲ್ಲಿ ಮತ್ತೊಂದು ಕೊವಿದ್ ಸಾವು ಸಂಭವಿಸಿದೆ. ಹೊಳೆನರಸೀಪುರದಲ್ಲಿ ಬೇಕರಿ ಇಟ್ಟಕೊಂಡಿರುವ ಬೇಲೂರು ತಾಲ್ಲೂಕಿನ 38  ವರ್ಷದ ವ್ಯಕ್ತಿ ನೆನ್ನೆ ತಮ್ಮ ಸ್ವ ಗೃಹದಲ್ಲಿ ತೀವ್ರ ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ನಂತರ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ್ದು, ಇಂದು ವರದಿ ಪಾಸಿಟಿವ್ ಎಂದು ಬಂದಿದೆ .
ಮೃತ ದೇಹವನ್ನು ತಾಲ್ಲೂಕು ನೋಡಲ್ ಅಧಿಕಾರಿ ಡಾ ನರಸೇಗೌಡ ಅವರ ಮಾರ್ಗ ದರ್ಶನದಲ್ಲಿ  ಸರ್ಕಾರಿ‌ ನಿಯಮಾನುಸಾರ ಸುರಕಕ್ಷತಾ ಕ್ರಮಗಳೊಂದಿಗೆ  ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸಾವಿನ‌ ಸಂಖ್ಯೆ 7 ಕ್ಕೆ‌ ಏರಿಕೆಯಾಗಿದೆ.

Post a Comment

Previous Post Next Post