ಹಾಸನ: ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷರಾಗಿ ಪ್ರೊ.ಜಯಣ್ಣಗೌಡ ಅವರನ್ನು ನೇಮಕ ಮಾಡಲಾಗಿದೆ.
ಇವರ ಕನ್ನಡ ನಾಡು ನುಡಿ ಸೇವೆಯನ್ನು ಪರಿಗಣಿಸಿ ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರು ಬೇಲೂರು ವೈ.ಎನ್.ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ಕಾಲೇಜಿನಲ್ಲಿ ಪ್ರಾಧ್ಯಪಾಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಎಲ್ಲಾ ಸೇವೆಗಳನ್ನು ಪರಿಗಣಿಸಿ ಅಧ್ಯಕ್ಷರಾಗಿ ಕನ್ನಡ ನಾಡು ನುಡಿಯ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ ಜೊತೆಗೆ ನಿಕಟಪೂರ್ವ ಅಧ್ಯಕ್ಷರಾದ ಹೆಚ್.ಎಂ.ದಯಾನಂದ ರವರನ್ನು ಗೌರವಾಧ್ಯಕ್ಷರಾಗಿ ಮುಂದುವರೆಯಲು ಸೂಚಿಸಲಾಗಿದೆ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ನಾಯಕರಹಳ್ಳಿಮಂಜೇಗೌಡರು ಹಾಗೂ ಗೌರವಾಧ್ಯಕ್ಷರಾದ ರವಿನಾಕಲಗೂಡು ರವರು ತಿಳಿಸಿದ್ದಾರೆ.
Tags
ಬೇಲೂರು