ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿ
ಹುಬ್ಬಳ್ಳಿಯಲ್ಲಿ ನಡೆದ ಭಾರತೀಯ ಅಯ್ಯಪ್ಪಸೇವಾ ಸಂಘದ ಕಾರ್ಯಕ್ರಮದಲ್ಲಿ ಭಾರತೀಯ ಅಯ್ಯಪ್ಪಸೇವಾ ಸಂಘ ರಾಷ್ಟ್ರೀಯ ಅಧ್ಯಕ್ಷರಾಗಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಉಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿ ತಾಲೂಕಿಗೆ ಹೆಮ್ಮೆ ಮೂಡಿಸಿದ್ದಾರೆ .
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಅಯ್ಯಪ್ಪಸ್ವಾಮಿ ಸಂಘದಿಂದ ಧಾರ್ಮಿಕ ಕಾರ್ಯಕ್ರಮ ಜತೆಗೆ ಸಾಮಾಜಿಕ ಕಾಳಜಿಯ ಹಿನ್ನಲೆ ರೂಪಿಸಿಕೊಂಡು ಕಾರ್ಯ ನಿರ್ವಹಿಸಲಾಗುವುದು . ರಾಜ್ಯದ ಎಲ್ಲ ಅಯ್ಯಪ್ಪಸ್ವಾಮಿ ಸೇವಾ ಸಮಿತಿಗಳ ಶ್ರೇಯೋಭಿವದ್ಧಿಗೆ ಶ್ರಮಿಸಲಾಗುವುದು . ಹೊರ ಜಿಲ್ಲೆ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ವಸತಿ ಸೌಕರ್ಯ ಅನ್ನದಾನ ಹಾಗೂ ವೈದ್ಯಕೀಯ ಸೇವಾ ಕೇಂದ್ರಗಳನ್ನು ಹೆಚ್ಚು ತೆರೆಯುವ ಮೂಲಕ ಅವರ ಸೇವೆಗೆ ಮುಂದಾಗುವುದಾಗಿ ತಿಳಿಸಿದರು .
ಅಯ್ಯಪ್ಪಸ್ವಾಮಿ ಭಕ್ತ ಮಾಲಾಧಾರಿಗಳಿಗೆ ಸಕಲ ಸೌಲಭ್ಯ ಒದಗಿಸುವಲ್ಲಿ ಬಿಎಎಸ್.ಎಸ್ ತನ್ನ ಪ್ರಯತ್ನ ಮಾಡುತ್ತದೆ.
ಮುಂದಿನ ದಿನಗಳಲ್ಲಿ ಶಬರಿಮಲೆಗೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ರೈಲು , ಬಸ್ಸಿನಲ್ಲಿ ಸರಾಗವಾಗಿ ಹೋಗಿ ಬರುವ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು .
ಅನ್ನದಾನ ಕೇಂದ್ರಗಳನ್ನು ವೈದ್ಯಕೀಯ ನೆರವನ್ನು ಎಲ್ಲಾ ತಾಲೂಕು ಜಿಲ್ಲೆಗಳಲ್ಲಿ ಪ್ರಾರಂಭಿಸ ಲಾಗುವುದು, ತಿರುವಾಂಕೂರ್ ದೇವಾಲಯ ಆಡಳಿತ ಮಂಡಳಿ ಸಹ ಭಾಗಿತ್ವದಲ್ಲಿ ಯಪ್ಪ ಗುಪ್ತ ದಾರಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಮುಂದಾಗುವುದಾಗಿ ತಿಳಿಸಿದರು .
ಅಭಿನಂದನೆ : ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಳ್ಳೂರು ಉಮೇಶ್ ರವರಿಗೆ ಎಲೂರು ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾದ ವೈ ಎನ್ ಕೃಷ್ಣೇಗೌಡರು, ಗುರುಸ್ವಾಮಿಗಳಾದ ದೇವಿ, ಗಣೇಶ್, ಸುಂದರ್ ರಾಜ್, ಶರತ್ ಆಚಾರ್ಯ ,ಜೀವನ್ ಶೈವ , ಯಮಸಂದಿ ಪಾಪು, ರಾಘವೇಂದ್ರ ಹೊಳ್ಳ , ಇತರರು ಅಭಿನಂದನೆ ಸಲ್ಲಿಸಿದ್ದಾರೆ .
Tags
ಬೇಲೂರು