ಹದಿನೈದು ದಿನ ಗಾರ್ಮೆಂಟ್ಸ್ ಮುಚ್ಚಲು ಬಿಜೆಪಿ ಮನವಿ

ಅರಸೀಕೆರೆ: ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗದಂತೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಅರಸೀಕೆರೆ ನಗರದಲ್ಲಿರುವ ಸಿದ್ಧ ಉಡುಪುಗಳ ಕಾರ್ಖಾನೆಯನ್ನು ಹದಿನೈದು ದಿನಗಳ ಮಟ್ಟಿಗೆ ಮುಚ್ಚಬೇಕು ಎಂದು ಬಿಜೆಪಿ ಒತ್ತಾಯಿಸಿದೆ. 
ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ಕಾರ್ಯದರ್ಶಿ  ವಿನೋದ್ ಕುಟ್ಟಿ, ಈಗಾಗಲೇ ಅರಸೀಕೆರೆ ತಾಲೂಕಿನಲ್ಲಿ 62 ಪ್ರಕರಣಗಳು ದಾಖಲಾಗಿದೆ. ಜೊತೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಖಾನೆಯನ್ನುತಾತ್ಕಾಲಿಕವಾಗಿ ಮುಚ್ಚಬೇಕು ಎಂದು ಮನವಿ ಮಾಡಿದರು.  
ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಚಂದ್ರು ಮಾತನಾಡಿ, ಗಾರ್ಮೆಂಟ್ಸ್‍ನ ಒಂದೇ ಜಾಗದಲ್ಲಿ ಸಾವಿರಾರು ಸಂಖ್ಯೆಯ ಜನರು ಕಾರ್ಯನಿರ್ವಹಿಸುತ್ತಾರೆ.  ಈಗಾಗಲೇ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡಿರುವ ಕಾರಣ ಹೀಗೆ ಒಂದೇ ಜಾಗದಲ್ಲಿ ಸಾವಿರಾರು ಜನರು ಒಂದೇ ಕಡೆ ಕೆಲಸ ಮಾಡುವುದು ಅಪಾಯಕಾರಿ. ಹಾಗಾಗಿ ಹೆಚ್ಚು ಜನರು ಕೆಲಸ ಮಾಡುವ ಗಾಮೆರ್ಂಟ್ಸ್ ಅನ್ನು 15 ದಿನ ಬಂದ್ ಮಾಡುವುದು ಒಳ್ಳೆಯದು ಎಂದರು.
 ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅವಿನಾಶ್ ನಾಯ್ಡು, ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಯಾದಾಪುರ ತೇಜಸ್, ಅರಸೀಕೆರೆ ಯುವಮೋರ್ಚಾ ನಗರ ಅಧ್ಯಕ್ಷ ಮಂಜುನಾಥ ಕೈಕೊ, ವಿನೋದ್, ಮೂರ್ತಿ, ಶೇಖರ್‍ಯಾದವ್ ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post