ಹಾಸನ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾಗೆ ಮತ್ತೊಂದು ಸಾವು
ಅರಸೀಕೆರೆ ತಾಲ್ಲೂಕು ಮೂಲದ 38 ವರ್ಷದ ಮಹಿಳೆ ಸಾವು...
ಹಾಸನ ಜಿಲ್ಲೆಯಲ್ಲಿ ಒಂದೆಡೆ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ರೆ ಮತ್ತೊಂದೆಡೆ ಸಾವಿನ ರಣಕೇಕೆ ಮುಂದುವರೆದಿದ್ದು, ಇಂದು ಸಹಾ ಕೊರೋನಾ ಜಿಲ್ಲೆಯಲ್ಲಿ ಮತ್ತೊಂದು ಬಲಿ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜುಲೈ 01ರಿಂದ ಪ್ರತಿದಿನ ಸಾವಿನ ಸರಣಿ ಮುಂದುವರೆದಿದ್ದು, ಒಟ್ಟು ಸಾವಿನ ಸಂಖ್ಯೆ 09ಕ್ಕೆ ಏರಿಕೆಯಾಗಿದ್ದು. ಅರಸೀಕೆರೆ ಮೂಲದ 38 ವರ್ಷದ ಮಹಿಳೆ ಸಾವನಪ್ಪಿದ್ದಾರೆನ್ನಲಾಗುತ್ತಿದ್ದು. ಜು.04ರಂದು ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಆದರೆ ಅಧಿಕೃತ ಘೋಷಣೆಯಾಗಬೇಕಿದೆ.
Tags
ಹಾಸನ