ಹಾಸನದಲ್ಲಿ ಕಿಲ್ಲರ್ ಕೊರೊನಾಗೆ ವೈದ್ಯರೊಬ್ಬರು ಮೊದಲ‌ ಬಲಿ

ಹಾಸನ: ಹಾಸನದಲ್ಲಿ ಕಿಲ್ಲರ್ ಕೊರೊನಾಗೆ ವೈದ್ಯರೊಬ್ಬರು ಮೊದಲ‌ ಬಲಿಯಾಗಿದ್ದಾರೆ‌. ಹಾಸನದ ಹೆಸರಾಂತ ಹಿರಿಯ ವೈದ್ಯ ರತ್ನಾಕರ್ ಶೆಟ್ಟಿ(77) ಮಹಾಮಾರಿಗೆ ಜೀವತೆತ್ತಿದ್ದಾರೆ.ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ರತ್ನಾಕರ್ ಶೆಟ್ಟಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ರಾತ್ರಿ ಕೊನೆಯು ಸಿರೆಳೆದಿದ್ದಾರೆ.  ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ 46 ಕ್ಕೆ ಏರಿದೆ.
ಮೃತರು ಖಾಸಗಿ ಕ್ಲೀನಿಕ್ ನಡೆಸುತ್ತಲೇ ಹೆಸರು ಮಾಡಿದ್ದರು.

Post a Comment

Previous Post Next Post