ನನ್ನ ಬದಲು ಪಕ್ಷದ ಹಿರಿಯರಿಗೆ ನಿಗಮಮಂಡಳಿ ನೀಡಲಿ: ಪ್ರೀತಂ ಗೌಡ ಅಚ್ಚರಿ ಹೇಳಿಕೆ

ಹಾಸನ: ನನ್ನ ಬದಲು ಪಕ್ಷದಲ್ಲಿ ಬೇರೆ ಹಿರಿಯರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.


ಹಾಸನದಲ್ಲಿ ಮಾತನಾಡಿದ ಅವರು, ನಾನು ನಿಗಮ ಮಂಡಳಿ ಆಕಾಂಕ್ಷಿ ಆಗಿರಲಿಲ್ಲ. ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ. ನನಗೆ ಈ ಸ್ಥಾನ ನೀಡಿದ್ದಕ್ಕೆ ಸಿಎಂಗೆ ಧನ್ಯವಾದ ಎಂದು ಹೇಳಿದರು.

ನನ್ನ ಬದಲು ಬೇರೆ ಆಕಾಂಕ್ಷಿ ಅಥವಾ ಹಿರಿಯರಿಗೆ ಈ ಸ್ಥಾನ ನೀಡಲಿ. ನಾನು ಯಡಿಯೂರಪ್ಪನವರ ಅಂಧಾಭಿಮಾನಿ. ನಾನು ಮೊದಲ ಬಾರಿಗೆದ್ದವನು, ನನಗಾವ ಆಸೆ ಇಲ್ಲ. ಮಂತ್ರಿ ಸ್ಥಾನ ಬೇಕಾದರೆ ನಾನು ನೇರವಾಗಿ ಕೇಳ್ತಿನಿ, ಸುತ್ತಿ ಬಳಸಿ ಕೇಳುವನು ನಾನಲ್ಲ. ಅದೆಲ್ಲಾ ಸೂಕ್ತ ಸಮಯದಲ್ಲಿ ನಮ್ಮ ಕೆಲಸ ಗುರುತಿಸಿ ಸಿಗುತ್ತದೆ. ಇನ್ನು ನನಗೆ ಕಾಲವಕಾಶ ಇದೆ ಎಂದರು.  

ಕಾರ್ಯಕರ್ತನನ್ನಾಗಿ ಕೆಲಸ ಮಾಡುತ್ತಿದ್ದವನನ್ನ ಶಾಸಕನನ್ನಾಗಿ ಮಾಡಿದ್ದು ಯಡಿಯೂರಪ್ಪ. ನಾನು ಯಡಿಯೂರಪ್ಪ ಹಾಕಿದ ಗೆರೆ ದಾಟಲ್ಲ. ಸರ್ಕಾರ ಇನ್ನೂ ಮೂರು ವರ್ಷ ಸುಭದ್ರವಾಗಿರಬೇಕು. ನನಗಿನ್ನೂ 38-39 ವರ್ಷ ವಯಸ್ಸಾಗಿದ್ದು, ಇನ್ನು 49 ವರ್ಷದ ತನಕ ರಾಜಕಾರಣ ಮಾಡಬೇಕು ಎಂದು ನಿಗಮಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಶಾಸಕ ಪ್ರೀತಂ ಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.

Post a Comment

Previous Post Next Post