ಹಾಸನ: ಜಿಲ್ಲೆಯಲ್ಲೂ ಭಾನುವಾರದ ಕೊರೊನಾ ತಡೆ ಲಾಕ್ ಡೌನ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವವರು ಎಂದಿನಂತೆ ಓಡಾಡಿದರೆ ವಿವಿಧ ರೀತಿಯ ವಾಹನ ಸಂಚಾರ ಮಾಮೂಲಿ ಇತ್ತು.
ಜೊತೆಗೆ ಹಾಲು, ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಎಂದಿನಂತೆಯೇ ಮುಂದುವರಿದಿತ್ತು. ಆದರೆ ಬೆಳಗ್ಗೆ 10 ಗಂಟೆ ನಂತರ ಎಲ್ಲಾ ಅಂಗಡಿ ಬಂದ್ ಸಂಪೂರ್ಣ ಆಗಿದ್ದವು. ಸಾರಿಗೆ ಬಸ್ ಸಂಚಾರ ಸೇರಿ ಎಲ್ಲಾ ರೀತಿಯ ವಾಹನ ಸಂಚಾರ ಬಹುತೇಕ ಸ್ಥಗಿತವಾಗಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದರು. ಹೋಟೆಲ್,ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಆಗಿದ್ದವು. ಪೆಟ್ರೋಲ್ ಬಂಕ್, ಮೆಡಿಕಲ್ ಅಂಗಡಿ ಎಂದಿನಂತೆ ತೆರೆದಿದ್ದವು. ಸಂಡೇಲಾಕ್ ಡೌನ್ ನಿಂದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಜನ ಸಂಚಾರ ಸಂಪೂರ್ಣ ವಿರಳವಾಗಿತ್ತು. ಒಟ್ಟಿನಲ್ಲಿ ಭಾನುವಾರದ ಲಾಕ್‍ಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೇ ರೀತಿಯಲ್ಲಿ ಜಿಲ್ಲೆಯಲ್ಲೂ ಕೂಡ ಒಂದು ದಿನದ ಲಾಕ್‍ಡೌನ್ ಗೆ ಎಲ್ಲರೂ ಬೆಂಬಲಿಸಿದರು.
Tags
ಹಾಸನ