ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಸಂಕಲಾಪೂರ ಮಠದ ನಡಬೆಟ್ಟ ಹತ್ತಿರ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ, ಮಳೆ ನೀರಿಗೆ ಕೊಚ್ಚಿ ಹೋಗಿ ಸಾವನಪ್ಪಿದ ಸ್ಥಳೀಯ ನಿವಾಸಿ ಸಿದ್ದಯ್ಯ ಅವರ ಕುಟುಂಬದ ನೆರವಿಗೆ ತಕ್ಷಣವೇ ಧಾವಿಸಿದ ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಆಹಾರ ನಾಗರಿಕ ಪೂರೈಕೆ ಸರಬರಾಜು ಇಲಾಖೆ ಸಚಿವರಾದ ಕೆ. ಗೋಪಾಲಯ್ಯ ಅವರು ಮೃತರ ಹೆಂಡತಿ ಜಯಮ್ಮ ಅವರಿಗೆ ಸಾಂತ್ವಾನ ಹೇಳಿ ಸ್ಥಳದಲ್ಲೇ 4 ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಹೆಚ್. ಕೆ ಕುಮಾರ ಸ್ವಾಮಿ ,ಮಾಜಿ ಶಾಸಕರಾದ ವಿಶ್ವನಾಥ್, ಜಿಲ್ಲಾಧಿಕಾರಿ ಆರ್, ಗಿರೀಶ್ ಅವರು ಉಪಸ್ಥಿತರಿದ್ದರು.
Tags
ಹಾಸನ