ಈ ಬಾರಿ ಮತದಾನಕ್ಕೆ ಹೊಸ ನೀತಿ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ

ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಲ್ಲಿ ಗುಂಡಿಯನ್ನು ಒತ್ತುವ ಮೊದಲು ಕೈಗವಸುಗಳನ್ನು (ಹ್ಯಾಂಡ್ ಗ್ಲೌಸ್‌) ಹಾಕಿಕೊಳ್ಳುವುದು ಮತ್ತು ಮನೆ-ಮನೆ ಪ್ರಚಾರಗಳನ್ನು ಮಾಡುವ ಮುನ್ನ ಕೇವಲ ಐದು ಮಂದಿ ಮಾತ್ರ ಜೊತೆಗೆ ಇರುವಂತೆ ನೋಡುಕೊಳ್ಳುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮಾರ್ಗಸೂಚಿಯನ್ನು ಹೊರಡಿಸಿದೆ.


ಆರೋಗ್ಯ ಸಚಿವಾಲಯವು ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತ ಹೆಚ್ಚಿನ ದೇಹದ ಉಷ್ಣತೆಯು ಕಂಡುಬರುವ ಮತದಾರರನ್ನು ಎರಡು ಬಾರಿ ಪರಿಶೀಲಿಸಲಾಗುತ್ತದೆ, ಮತ್ತು ಫಲಿತಾಂಶವು ಒಂದೇ ಆಗಿದ್ದರೆ, ಮತದಾನದ ಕೊನೆಯ ಗಂಟೆಯಲ್ಲಿ ಅವರನ್ನು ಮತ್ತೆ ಭೇಟಿ ಮಾಡಲು ಹೇಳಲಾಗುತ್ತದೆ. "ಮತದಾನದ ಕೊನೆಯ ಗಂಟೆಯಲ್ಲಿ, ಅಂತಹ ಮತದಾರರಿಗೆ ಮತದಾನಕ್ಕೆ ಅನುಕೂಲವಾಗಲಿದೆ, COVID-19 ಸಂಬಂಧಿತ ತಡೆಗಟ್ಟುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು" ಎಂದು ಚುನಾವಣಾ ಆಯೋಗವು ತನ್ನ ಇತ್ತೀಚಿನ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

Post a Comment

Previous Post Next Post