ರಾಜ್ಯದಲ್ಲಿ ಕೊಯ್ಲು ಯಂತ್ರಗಳಿಗೆ ದಿಢೀರ್‌ ಹೆಚ್ಚಿದ ಬೇಡಿಕೆ..!

ಚನ್ನರಾಯಪಟ್ಟಣ: ಕೊಯ್ಲಿಗೆ ಬಂದಿರುವ ಬೆಳೆ ಕಟಾವು ಮಾಡಲು ರೈತರು ಮುಂದಾಗಿರುವ ಹಿನ್ನೆಲೆಯಲ್ಲಿ ನೆರೆಯ ಆಂಧ್ರ ಮತ್ತು ತಮಿಳುನಾಡಿನಿಂದ ಕೊಯ್ಲು ಯಂತ್ರಗಳು ಬಂದಿದ್ದು, ಶನಿವಾರದಿಂದ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಈ ಭಾರಿ ರಾಗಿ ಬೆಳೆ ಸಮೃದ್ಧವಾಗಿ ಬಂದಿದ್ದು, ಮಳೆಯಿಂದಾಗಿ ಕೈಗೆ ಬಂದ ಬೆಳೆ ಬಾಯಿಗೆ ಇಲ್ಲದಂತಾಗಿದೆ. ಕೊಯ್ಲು ಯಂತ್ರಗಳಿಗೆ ದುಬಾರಿ ಬಾಡಿಗೆ ಕೇಳುತ್ತಾರೆ. ಗಂಟೆಗೆ 4 ಸಾವಿರ ರೂ. ನಿಗದಿ ಮಾಡಿದ್ದಾರೆ. ಕೆಲವರು ಎಕರೆಗೆ 5 ಸಾವಿ ರ ರೂ. ನಿಗದಿ ಮಾಡಿದ್ದಾರೆ. ಹಣ ನೀಡಿ ಕೊಯ್ಲು ಮಾಡಿಸಿದರೆ ಹುಲ್ಲು ಪ್ರಯೋಜನಕ್ಕೆ ಬಾರದು ಎನ್ನುತ್ತಾರೆ ರೈತರು.

ಈ ಬಾರಿ ಹೊಲಗಳಲ್ಲಿ ಅವರೆ ಕಾಯಿ ಇಲ್ಲದಂತಾಗಿದೆ. ಮಳೆ, ಮೋಡ ಕವಿದ ವಾತಾವರಣದಿಂದ ಗಿಡ ಹಾಳಾಗಿದ್ದು, ಅಲ್ಪಸ್ವಲ್ಪ ಉಳಿದಿರುವ ಗಿಡದಲ್ಲಿ ಹೂ ಮೊಗ್ಗು ಉದುರಿ ಹೋಗಿದೆ. ಇರುವ ಕಾಯಿಗೆ ನುಸಿ ಹುಳು ಆವರಿಸಿದೆ. ಈ ಬಾರಿ ನಾಟಿ ಅವರೆ ಸಿಗುವುದು ಕಡಿಮೆ ಎನ್ನುತ್ತಾರೆ ಮಲ್ಲೇನಹಳ್ಳಿ ರೈತ ಶಿವಕುಮಾರ್‌.

Post a Comment

Previous Post Next Post