ಬೇಲೂರು: ವಿದ್ಯುತ್ ಶಾರ್ಟ್‍ಸಕ್ರ್ಯೂಟ್‍ನಿಂದ ಟಿವಿ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಹಾಗೂ
ದಾಖಲೆಗಳು ಸುಟ್ಟುಹೋಗಿರುವ ಘಟನೆ ತಾಲ್ಲೂಕಿನ ಸಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ನೀಡಿರುವ ದೇವರಾಜು, ಮಾರ್ಚ್ 25 ರಂದು
ನಾವುಗಳು ಸಂತೆಗೆಂದು ಹಗರೆಗೆ ಹೋಗಿದ್ದೆವು. ಮನೆಯಲ್ಲಿ ಮಗ ಉಮೇಶ್ಇದ್ದನು. ರಾತ್ರಿ ಸುಮಾರು 8.30 ರ ಸುಮಾರಿನಲ್ಲಿ ಟಿವಿ ಸುಚ್ ಆನ್ ಮಾಡಿದಾಗ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು ಮನೆಪೂರ್ತ ವ್ಯಾಪಿಸಿದೆ. ಮನೆಯ ಮೇಲ್ಚಾವಣಿ ಸುಟ್ಟುಹೋಗಿದ್ದು ಮನೆಯಲ್ಲಿದ್ದ ಹಲವು ದಾಖಲೆಗಳು ಹಾಗೂ ಅಲ್ಮೇರಾದಲ್ಲಿ ಇರಿಸಲಾಗಿದ್ದ 80ಸಾವಿರ ರೂ.ನಗದು ಮತ್ತು ಆಭರಣ ಸುಟ್ಟುಹೋಗಿದೆ. ಮನೆಗೂ ಹಾನಿಯಾಗಿದೆ. ಇದರಿಂದ ಸುಮಾರು 1.80 ಲಕ್ಷರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Tags
ಬೇಲೂರು