ರಂಗಭೂಮಿ ಕಲಾವಿದರೆ ನಿಜವಾದ ಹೀರೋಗಳು: ಲಿಂಗೇಶ್

ಬೇಲೂರು: ಸಂಸ್ಕೃತಿ ಸಂಸ್ಕಾರದ ಗಟ್ಟಿತನ ಉಳಿದಿಲ್ಲದ ಚಲನಚಿತ್ರರಂಗದ ಹೀರೋಗಳಿಗಿಂತ
ರಂಗಭೂಮಿ ಕಲಾವಿದರೆ ನಿಜವಾದ ಹೀರೋಗಳು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಶ್ರೀಚನ್ನಕೇಶವಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಬೇಲೂರು ಸಂಯುಕ್ತವಾಗಿ ಇಲ್ಲಿನ ದಾಸೋಹ ಸಭಾಭವನದಲ್ಲಿ ಏರ್ಪಡಿಸಿದ್ದ ವಿಶ್ವ
ರಂಗಭೂಮಿ ಜಿಲ್ಲಾಮಟ್ಟದ ದಿನಾಚರಣೆ ಅಧ್ಯಕ್ಷತೆ
ವಹಿಸಿ ಮಾತನಾಡಿದ ಅವರು, ಚಲನಚಿತ್ರದಲ್ಲಿ
ಅಭಿನಯಿಸುವ ನಟನಿಗೆ ಹತ್ತಾರುಬಾರಿ ಟ್ರಯಲ್ ನೀಡಿ ಚಿತ್ರೀಕರಿಸುತ್ತಾರೆ, ಆದರೆ ರಂಗಭೂಮಿ ನಾಟಕದಲ್ಲಿ ಪಾತ್ರ ಆರಂಭಗೊಂಡರೆ ಅಡೆತಡೆ ಇಲ್ಲದಂತೆ ಅಭಿನಯಿಸಬೇಕಾಗುತ್ತದೆ. ಚಲನಚಿತ್ರಗಳಲ್ಲಿ ಲಾಂಗ್ ಹಿಡಿದವನೆ ಹೀರೋ ಎನ್ನುವ ಕತೆಗಳು ಇದೀಗ ಚಿತ್ರವಾಗುತ್ತಿವೆ. ಇದು ಭವಿಷ್ಯದಲ್ಲಿ ಸಮಾಜಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.

ಅಧಿವೇಶನಲ್ಲಿ ಸಿಡಿ ಒಂದರ ವಿಷಯ ತೆಗೆದುಕೊಂಡು ಇಡಿ ಅಧಿವೇಶನವನ್ನೇ ಹಾಳು ಮಾಡುತ್ತಿದ್ಧಾರೆ. ಯಾವುದಕ್ಕೂ ಒಂದು ಇತಿಮಿತಿ ಇರಬೇಕು. ನಾಡಿನ ಅನೇಕ ಸಮಸ್ಯೆಗಳ ಚರ್ಚೆಗೆಂದೇ ನಡೆಸುವ ಅಧಿವೇಶನದಲ್ಲಿ ವಯಕ್ತಿಕ ವಿಷಯವೊಂದನ್ನೇ ಪ್ರತಿನಿತ್ಯ ಚರ್ಚಿಸುವುದಾದರೆ, ಇದು ರಾಜ್ಯದ ಜನತೆಗೆ
ತಪ್ಪುಸಂದೇಶ ರವಾನೆಯಾಗುತ್ತದೆ. ಮಾಧ್ಯಮಗಳು ಸಹ ಸಿಡಿ ವಿಷಯದಲ್ಲಿ ಪಾರುಪತ್ಯ ನಡೆಸುತ್ತಿವೆ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಶಾಸಕನಾಗಿ ನಾನು ಕ್ಷೇತ್ರದಲ್ಲಿ ಉತ್ತಮ ಕೆಲಸಗಳ ಮಾಡಲು ವೈದ್ಯರು ಸೇರಿದಂತೆ ಇಲ್ಲಿನ ಅಧಿಕಾರಿ, ನೌಕರರು ಕಾರಣವಾಗಿದ್ದಾರೆಂದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹೆಚ್.ಎಂ. ನಾಗರಾಜ್‍ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಳಿದಾಸ ಪರಂಪರೆಯನ್ನು ಹೊಂದಿರುವ ಭಾರತದ ಕಲೆ ವಿಶ್ವದಲ್ಲಿನ ಯಾವುದೆ ಕಲೆಗೂ ಕಮ್ಮಿಯಿಲ್ಲ. ಇಲ್ಲಿನ ಸಂಗೀತ
ತಲೆತೂಗಿಸುವುದಾದರೆ ಪಾಶ್ಚಿಮಾತ್ಯ ಸಂಗೀತ
ಕಾಲು ಕುಣಿಸುತ್ತದೆ. ರಾಜಮಹಾರಾಜರು ಕಲೆಗೆ
ಹೆಚ್ಚಿನ ಪ್ರೋತ್ಸಾಹ ನೀಡಿದ್ದರಿಂದ ಬೇಲೂರು,
ಹಳೇಬೀಡು ಇಂದು ವಿಶ್ವಮಾನ್ಯತೆ ಪಡೆದಿದೆ.
ನಿಜವಾದ ಯೂನಿವರ್ಸಿಟಿ ರಂಗಭೂಮಿಯಾಗಿದೆ.
ಶಾಲಾಕಾಲೇಜುಗಳಲ್ಲಿ ಸಂಸ್ಕøತಿ ಬೆಳೆಸುವಂತ,
ಸಂಸ್ಕಾರ ಕಲಿಸುವಂತ ಕಾರ್ಯಕ್ರಮ ರೂಪಿಸಬೇಕೆಂದು ಸಲಹೆ ನೀಡಿದರು.
ವಿದೇಶಿ ಮನರಂಜನಾ ಕಾರ್ಯಕ್ರಮವಾದ
ಬಿಗ್‍ಬಾಸ್ ಸಂಸ್ಕಾರರಹಿತವಾಗಿದ್ದು ಸಮಾಜಕ್ಕೆ
ಪೂರಕವಾದಂತ ಕಥಾವಸ್ತು ಅಲ್ಲಿಲ್ಲ. ಇದಕ್ಕೆ
ವಿರುದ್ಧವಾದ ರಂಗಕಲೆ, ಸಮಾಜ, ಇತಿಹಾಸ, ಆಡಳಿತ
ಇವುಗಳನ್ನು ತೋರಿಸುವ ಜನಪದದ ಬದುಕು
ಆಗಿದೆ. ಮಕ್ಕಳಿಗೆ ರಂಗಕಲೆ ಬಗ್ಗೆ ಪೋಷಕರು
ಆಸಕ್ತಿ ಬೆಳೆಸಬೇಕೆಂದು ಕರೆ ನೀಡಿದರು.
ಪ್ರಾಸ್ಥವಿಕವಾಗಿ ಮಾತನಾಡಿದ ಕಸಾಪ
ತಾಲ್ಲೂಕು ಅಧ್ಯಕ್ಷ ಪ್ರೋ.ಜಯಣ್ಣಗೌಡ,
ರಂಗಭೂಮಿಯ ಪರಿಕಲ್ಪನೆ ಇಟಿಲಿ ದೇಶದ್ದಾಗಿದೆ.
ಮೌಲ್ಯಗಳ ಉಳಿಸುತ್ತಿರುವ ರಂಗಕಲೆ ಟಿವಿ
ಮಾಧ್ಯಮದ ಹಾವಳಿಯಿಂದ ಆಕರ್ಷಿಸುತ್ತಿಲ್ಲ. ಇಂದಿನ
ಧಾರಾವಾಹಿಗಳು ಮೌಲ್ಯರಹಿತ ಬದುಕು ಕಟ್ಟಿಕೊಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಅತಿಥಿಗಣ್ಯರನ್ನು ಗೌರವಿಸಲಾಯಿತು. ಪ್ರಸಕ್ತ ರಂಗಭೂಮಿ ಕುರಿತು ತಾ.ಜಾನಪದ ಪರಿಷತ್ತು ಅಧ್ಯಕ್ಷ
ವೈ.ಎನ್.ಸಿದ್ದೇಗೌಡ ಮಾತನಾಡಿದರು.

ವಿಶ್ವರಂಗಭೂಮಿ ಸಂದೇಶವನ್ನು ಕಲಾವಿದ ಡಾ.ಯಲಗುಂದ ಶಾಂತಕುಮಾರ್, ಹಾಸನದ ಗಾಡೇನಹಳ್ಳಿ ಕೃಷ್ಣೇಗೌಡ, ಕೀರ್ತನಾ ಕಲಾವಿದೆ ಇಂದಿರಮ್ಮ, ತಾ.ಕಲಾವಿದರ ಸಂಘದ ಅಧ್ಯಕ್ಷ ಆಡಿಟರ್ ಕೃಷ್ಣಮೂರ್ತಿ ವಾಚಿಸಿದರು. ತಾ.ಆರೋಗ್ಯಾಧಿಕಾರಿ ಡಾ.ವಿಜಯ್, ಡಾ.ನರಸೇಗೌಡ
ಇದ್ದರು. ಸ್ವಾಗತ ಯಮಸಂಧಿಪಾಪು, ಚನ್ನಕೇಶವೇಗೌಡ ಪ್ರಾರ್ಥನೆ ನಡೆಸಿಕೊಟ್ಟರು.

Post a Comment

Previous Post Next Post