ಹಾಸನ: ಕನ್ನಡ ಸಾಹಿತ್ಯ ಪರಿಷತ್ ಪಾರದರ್ಶಕ ಆಡಳಿತಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶ ನನ್ನದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಗಂಜಲಗೂಡು ಗೋಪಾಲಗೌಡ ತಿಳಿಸಿದರು.
ಅವರು ಬುಧವಾರ ಬೆಳಿಗ್ಗೆ ನಗರದ ಕಸಾಪ ಆವರಣದಲ್ಲಿರುವ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ರಾಷ್ಟçಕವಿ ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದ ಬಳಿಕ ತಾಲ್ಲೂಕು ಕಛೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆಲವೊಬ್ಬರ ಕಪಿಮುಷ್ಟಿಯಲ್ಲಿರುವ ಕಸಾಪವನ್ನು ಸಾಹಿತ್ಯಲೋಕದಡೆಗೆ ಪುನ ಕೊಂಡೊಯ್ಯುವುದು ನನ್ನ ಮುಖ್ಯಗುರಿ. ಕಸಾಪ ಯಾರ ಸ್ವತ್ತಲ್ಲ. ಅದು ಪ್ರತಿಯೊಬ್ಬ ಕನ್ನಡಿಗರ ಆಸ್ತಿ. ಆ ಪವಿತ್ರ ಜಾಗವನ್ನು ಕಾಪಾಡಿಕೊಂಡು ಸಾಹಿತ್ಯಾಸಕ್ತರಿಗೆ, ಕನ್ನಡದ ಮನಸ್ಸುಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆಸಕ್ತಿ ವಹಿಸಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದಾಗಿ ತಿಳಿಸಿದರು.
ನಾಡು,. ನುಡಿ, ನೆಲ- ಜಲ ಸಂರಕ್ಷಣೆ ಮಾಡುವುದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ಅನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವು ಆಲೋಚನೆ ನನದು. ಈಗಾಗಲೇ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ್ದಾಗ ಕಸಾಪ ಸದಸ್ಯರು ಉತ್ತಮ ಬೆಂಬಲ ನೀಡಿದ್ದಾರೆ. ಇವರ ಬೆಂಬಲ ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ಗೆ ಅನೇಕ ವರ್ಷಗಳಿಂದ ದುಡಿದಿದ್ದು ಹಲವು ಯಶಸ್ವಿ ಕಾರ್ಯಕ್ರಮಗಳಿಗೆ ಕೈ ಜೋಡಿಸಿದ್ದೇನೆ. ಹಾಸನ ತಾಲ್ಲೂಕು ಕಸಾಪ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅನುಭವ ಇದೆ. ನನ್ನ ಕೆಲಸ ಕಾರ್ಯಗಳನ್ನು ಗಮನಿಸಿರುವ ಕಸಾಪ ಸದಸ್ಯರು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲು ಒತ್ತಾಯಿಸಿದ್ದರು. ಇವರ ಮುಂದಿನ ಆಶೀರ್ವಾದ ನಾನು ಕಸಾಪದಲ್ಲಿ ಹೆಚ್ಚು ಕೆಲಸ ಮಾಡಲು ಪೂರಕವಾಗಿದೆ ಎಂದರು ತಿಳಿಸಿದರು.
ಈಗಾಗಲೇ ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷರು, ಹಿರಿಯ ಸಾಹಿತಿಗಳು, ಕವಿಗಳು, ಲೇಖಕರು, ಪತ್ರಕರ್ತರ, ಉಪನ್ಯಾಸಕರು, ಕಲಾವಿದರು, ಶಿಕ್ಷಕರು ಮುಕ್ತವಾಗಿ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಕಟ್ಟಕಡೆಯ ಕಸಾಪ ಮತದಾರರನ್ನು ಭೇಟಿ ಆಶೀರ್ವಾದ ಪಡೆದಿದ್ದೇನೆ. ಈ ಭಾರಿಯ ಚುನಾವನೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುರುಗಳಾದ ಶಿವಾಜಿ, ಯಲಗುಂದಶಾAತಕುಮಾರ್, ಹಾಸನ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಮಮಂತೇಶ್,ನಗರಸಭೆ ಸದಸ್ಯ ಮಹೇಶ್ , ನೇತ್ರಾವತಿ ಬಸವರಾಜ್, ಪತ್ರಕರ್ತೆ ಪವಿತ್ರ ಉದೇವಾರ, ಅರಸೀಕೆರೆ ರುದ್ರಸ್ವಾಮಿ,ಚಿತ್ರ ನಿರ್ದೇಶಕ ಅರುಣ್‌ಗೌಡ,ಮಾರ್ಕೇಟ್ ರಾಜು, ತಮ್ಲಾಪುರ ಶಂಕರ್,ಗವೇನಹಳ್ಳಿ ಪ್ರದೀಪ್ ಸೇರಿದಂತೆ ನೂರಾರರು ಕಸಾಪ ಸದಸ್ಯರು ಇದ್ದರು.
