ಮಹಿಳೆ-ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ .

 ಹಾಸನ : ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರಾಳ ಮಹಿಳಾ ದಿನ ಆಚರಣಾ ಸಮಿತಿಯಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು


.

        ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ನಾಲ್ಕು ತಿಂಗಳ ಹಿಂದೆ ಬೀದಿ ಬದಿಯಲ್ಲಿ ಮಲಗಿದ್ದ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಮೇಲೆ ಅತ್ಯಾಚಾರವೆಸಗಿದಲ್ಲದೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ನಡೆಸಲಾಗಿದ್ದರೂ ಅತ್ಯಾಚಾರಿ ಇನ್ನೂ ಪತ್ತೆಯಾಗಿರುವುದಿಲ್ಲ. ಕಳೆದ ಮೂರು ದಿವಸಗಳ ಹಿಂದೆ ಹೊಸ ಬಸ್ ನಿಲ್ದಾಣದಲ್ಲಿ ಮಲಗಿದ್ದ ೭ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ. ಮಹಾರಾಜ ಪಾರ್ಕ್ನಲ್ಲಿ ಅಪ್ರಾಪ್ತಲೊಬ್ಬಳ ನಿರಂತರ ದುರ್ಬಳಿಕೆ ಆಗಿ ಮೌಖಿಕ ದೂರು ನೀಡಲಾಗಿತ್ತು. ಹಾಸನ ನಗರದ ಸಾರ್ವಜನಿಕ ಸ್ಥಳಗಳಲ್ಲೆ ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷತೆ ಎಲ್ಲವಾದರೇ ಇತರೆ ಕಡೆಗಳಲ್ಲಿ ರಕ್ಷಣೆಯನ್ನು ಹೇಗೆ ಕೊಡುಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಕೂಡಲೆ ಮಹಿಳಾ ಜಾಗೃತ ದಳ ನಿರ್ಮಿಸಿ ಬಲಗೊಳಿಸಬೇಕು ಎಂದು ಒತ್ತಾಯಿಸಿದರು. 

      ಮಹಿಳೆ, ಮಕ್ಕಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ದೌರ್ಜನ್ಯ ಸಂಬAಧಿಸಿದ ಯಾವುದೇ ಪ್ರಕರಣ ಯಾವುದೇ ಪೊಲೀಸ್ ಠಾಣೆಗೆ ಬಂದರೂ ಅದಕ್ಕೆ ಸಮರ್ಪಕ ಸೆಕ್ಷನ್ ಹಾಕಿ, ಕಡ್ಡಾಯವಾಗಿ ಪ್ರಕರಣ ದಾಖಲಿಸಿ ಯಾವುದೇ ಪ್ರಭಾವದಿಂದ ಮುಚ್ಚಿಹೋಗದಂತೆ ನೋಡಿಕೊಳ್ಳಬೇಕು. ಯಾವುದೇ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಿಗಳನ್ನು ತಕ್ಷಣವೇ ಬಂಧಿಸಬೇಕು. ಬಾಲ್ಯವಿವಾಹ ತಡೆಗಟ್ಟಲು ವ್ಯಾಪಕ ಪ್ರಯತ್ನಿಸಿ,  ಹೀಗಾಗಿ ವಿವಿಧ ಇಲಾಖೆಗಳ ಸಮ್ಮಿಲನದ ಸಮಿತಿ ರಚಿಸಿ, ನಿರಂತರ ಸಮನ್ವಯ ಸಭೆ ಮಾಡುವ ಮೂಲಕ ಕ್ಷೇತ್ರ ಕಾರ್ಯದ ಮೂಲಕ ನಿಯಂತ್ರಿಸಬೇಕು. ಗ್ರಾಮಪಂಚಾಯತ್‌ಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಲು ಹೊಣೆ ನೀಡಬೇಕು. ಪೊಲೀಸ್ ಠಾಣೆಗಳು ಅಸಹಾಯಕರಾದ ಮಹಿಳೆ, ಮಕ್ಕಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸ್ನೇಹಿಯಾಗಿ ಅವರ ಸಮಸ್ಯೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಬೇಕು. ಅವರ ಯಾವುದೇ ಪ್ರಕರಣ ನಿರ್ಲಕ್ಷಿಸಬಾರದು ಎಂದರು. ಇನ್ನು ವಸತಿಗೃಹ, ರೆಸಾರ್ಟ್ ಇತರೆ ಕಡೆ ಗಮನವಹಿಸಬೇಕು. ಪ್ರತಿ ಶಾಲಾ ಮತ್ತು ಕಾಲೇಜುಗಳಲ್ಲಿ ಕಡ್ಡಾಯವಾಗಿ ದೌರ್ಜನ್ಯ ತಡೆ ಸಮಿತಿ ಹಾಗೂ ಬಸ್, ರೈಲ್ವೆ ನಿಲ್ದಾಣ, ಪಾರ್ಕ್, ಚಿತ್ರಮಂದಿರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಕ್ಷಣಾ ಸೌಲಭ್ಯ ಹೆಚ್ಚಿಸಿ ಕಠಿಣ ಕ್ರಮವಹಿಸಬೇಕು ಎಂದು ತಮ್ಮ ಬೇಡಿಕೆಯನ್ನು ಮುಂದಿಟ್ಟರು. 

     ವಿವಿಧ ಇಲಾಖೆ ಮತ್ತು ಸಾರ್ವಜನಿಕರ ನೆರವಿನಿಂದ ತುರ್ತಾಗಿ ಜಾರಿಗೊಳಿಸಿ, ತಿಂಗಳೊಳಗೆ ಜಿಲ್ಲಾ ಮಟ್ಟದ ಮಹಿಳಾ ಜಾಗೃತ ದಳ ರೂಪಿಸಿ ಸಭೆಯನ್ನು ಕರೆಯಬೇಕೆಂದು ಕೋರಿದರು.

      ಮೌನ ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ರೂಪ ಹಾಸನ್, ಮಹಿಳಾ ಸಂಘದ ಲೀಲಾವತಿ, ಜನನಿ ಫೌಂಡೇಶನ್ ಜಿಲ್ಲಾಧ್ಯಕ್ಷೆ ಹೆಚ್.ಎಸ್. ಭಾನುಮತಿ, ಹಿರಿಯ ವೈದ್ಯರಾದ ಭಾರತೀರಾಜಶೇಖರ್, ಅನನ್ಯ ಟ್ರಸ್ಟö್ನ ಕೆ.ಟಿ. ಜಯಶ್ರೀ, ಸುವರ್ಣ, ಅಂತರಾಷ್ಟಿçÃಯ ಕಲಾವಿದ ಕೆ.ಟಿ. ಶಿವಪ್ರಸಾದ್, ಡಿವೈಎಫ್‌ಐ ಮುಖಂಡ ಎಂ.ಜಿ. ಪೃಥ್ವಿ, ನವಕರ್ನಾಟಕ ಯುವಶಕ್ತಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಡಿ. ಶಂಕರಗೌಡ, ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಸ್ವಾಭಿಮಾನ ಬಳಗದ ಅಧ್ಯಕ್ಷ ಹರೀಶ್, ವೈ.ಎಸ್. ವೀರ ಭದ್ರಪ್ಪ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post