© ಹಾಸನ ಸೀಮೆ ನ್ಯೂಸ್
ಹಾಸನ ಏ.೨೯: ಸಮಗ್ರ ಸಾಧನೆಗಾಗಿ ರಾಷ್ಟಮಟ್ಟದ ಗ್ರಾಮೀಣಾಭಿ ವೃದ್ಧಿ ಪ್ರಶಸ್ತಿ ಪಡೆದಿರುವ ಹಾಸನ ಜಿಲ್ಲಾ ಪಂಚಾಯಿತಿ ಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಅಭಿನಂದಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೇಂದ್ರ ಪರುಸ್ಕಾರವನ್ನು ಸಾಂಕೇತಿಕವಾಗಿ ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಅವರಿಗೆ ಹಸ್ತಾಂತರ ಮಾಡಿದ ಸಚಿವರು ಸಾಧನೆ ಜಿಲ್ಲೆಗೆ ಕೀರ್ತಿ ತಂದಿದ್ದು, ಇದಕ್ಕೆ ಕಾರಣರಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅರ್. ಗಿರೀಶ್, ಸಚಿವರ ಅಪ್ತ ಕಾರ್ಯದರ್ಶಿ ಕಾಂತರಾಜ್ , ಅಪರ ಪೋಲಿಸ್ ವರಿಷ್ಠಾ ಧಿಕಾರಿ ಬಿ.ಎನ್. ನಂದಿನಿ ಮತ್ತಿತರರು ಹಾಜರಿದ್ದರು.
Tags
ಹಾಸನ