© ಹಾಸನ ಸೀಮೆ ನ್ಯೂಸ್
ಹಾಸನ: ಕೊರೋನಾ ಸೋಂಕು ದಿನೆ ದಿನೆ ಹೆಚ್ಚಾಗುತ್ತಿರುವದರಿಂದ ಜಿಲ್ಲಾಧಿಕಾರಿ ಕಛೇರಿಯ ಪೂರ್ಣ ಕಟ್ಟಡ ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಯ ಸುತ್ತ ಕಟ್ಟಡಕ್ಕೆ ಸ್ಯಾನಿಟೈಸರನ್ನು ನಗರಸಭೆ ಸಂಯುಕ್ತಾಶ್ರಯದಲ್ಲಿ ಅಗ್ನಿಶಾಮಕ ದಳದವರು ಸಿಂಪಡಿಸಿದರು.
ನಾನಾ ಕೆಲಸಗಳಿಗೆ ಪ್ರತಿನಿತ್ಯ ಸಾರ್ವಜನಿಕರು ಹೆಚ್ಚು ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದು ಹೋಗುತ್ತಾರೆ. ಈ ವೇಳೆ ಕೊರೋನಾ ಸೋಂಕು ಇರುವವರು ಬಂದು ಹೋಗುವುದರಿಂದ ಕ್ರೀಮಿಗಳು ಗೋಡೆಗಳಿಗೆ ಅಂಟಿರುತ್ತದೆ. ಇನ್ನು ಹಿಮ್ಸ್ ಆಸ್ಪತ್ರೆಗೂ ಕೂಡ ರೋಗಿಗಳ ಸಂಬAಧಿಕರು ಬಂದು ಹೋಗುವುದರಿಂದ ಸೋಂಕು ತಡೆಯಲು ಮುನ್ನೇಚ್ಚರಿಕ ಕ್ರಮವಾಗಿ ಕಟ್ಟಡದ ಸುತ್ತ ಅಗ್ನಿಶಾಮಕ ನೆರವಿನೊಂದಿಗೆ ನಗರಸಭೆಯವರು ಸ್ಯಾನಿಟೈಸರ್ ಹಾಕಲು ಮುಂದಾಗಿದ್ದಾರೆ.
Tags
ಹಾಸನ