ವೈದ್ಯರ ನಡೆ ಹಳ್ಳಿ ಕಡೆ' ವಾಹನಕ್ಕೆ ಬೇಲೂರಿನಲ್ಲಿ ಚಾಲನೆ

ಬೇಲೂರು : `ವೈದ್ಯರ ನಡೆ ಹಳ್ಳಿ ಕಡೆ' ಎಂಬ ವಾಹನಕ್ಕೆ ಬೇಲೂರು ತಾಲೂಕಿನ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಚಂದ್ರಶೇಖರ್ ಚಾಲನೆ ನೀಡಿದರು.



ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಉಪಕಾರ್ಯದರ್ಶಿ ಚಂದ್ರಶೇಕರ್, ಕೊರೊನಾ ಸೋಂಕನ್ನು ನಿಯಂತ್ರಿಸಲು ಇಂದಿನಿಂದ ಸರ್ಕಾರದ ಆದೇಶದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ

ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವಂತ ಹಳ್ಳಿಗಳನ್ನು ನಮ್ಮ ವೈದ್ಯರ ತಂಡ ಮತ್ತು ಸಿಬ್ಬಂದಿಗಳು

ನಮ್ಮ ವಾಹನದಲ್ಲಿ ತೆರಳಿ ಹೆಚ್ಚು ಸೋಂಕು ಪೀಡಿತ ಹಳ್ಳಿಗಳನ್ನು ಗುರುತಿಸಿ ಸ್ಥಳಕ್ಕೆ ಭೇಟಿ ನೀಡಿ ರೋಗದ ಲಕ್ಷಣಗಳು ಇರುವಂತ ಸೋಂಕಿತರನ್ನು ಪತ್ತೆಹಚ್ಚಿ

ಅವರನ್ನು ಪರೀಕ್ಷೆ ನಡೆಸಿ ಅವರಿಗೆ ಕೊರೊನಾ ಸೋಂಕು

ಇರುವುದು ಕಂಡು ಬಂದಲ್ಲಿ ಅಲ್ಲೆ ಕ್ವಾರೈಂಟೈನ್ ಮಾಡುವ

ಮೂಲಕ ಪ್ರತಿದಿನ ವೈದ್ಯರ ತಂಡ ಚಿಕಿತ್ಸೆ ನೀಡುತ್ತದೆ.

ಈಗಾಗಲೇ ಅರೇಹಳ್ಳಿ, ಬಿಕ್ಕೋಡು, ಚಟಚಟ ನಹಳ್ಳಿ, ನಾಗೇನಹಳ್ಳಿಯಲ್ಲಿ ನಮ್ಮ ವೈದ್ಯರ ತಂಡ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.


ತಾಲೂಕು ವೈದ್ಯಾಧಿಕಾರಿ ವಿಜಯ್ ಮಾತನಾಡಿ, ಸರ್ಕಾರದ

ನಿಯಮದಂತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೋಂಕು

ಜಾಸ್ತಿ ಇರುವ ಹಳ್ಳಿಗಳಲ್ಲಿ ಪ್ರತಿದಿನ ಮೂರು ಹಳ್ಳಿಗಳನ್ನು

ಗುರುತಿಸಿ ಕೋವಿಡ್ ಪಾಜಿಟಿವ್ ಇರುವಂತ ರೋಗಿಗಳು ಹಾಗೂ

ಇತರ ಸಣ್ಣಪುಟ್ಟ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅಲ್ಲಿ

ಚಿಕಿತ್ಸೆ ನೀಡಲಾಗುವುದು ಎಂದರು. ತಹಸೀಲ್ದಾರ್ ಎನ್.ವಿ.ನಟೇಶ್,

ವೈದ್ಯಾಧಿಕಾರಿ ಡಾ.ನರಸೇಗೌಡ ಮತ್ತು ಸಿಬ್ಬಂದಿಗಳು

ಉಪಸ್ಥಿತರಿದ್ದರು.


26 ಬಿಎಲ್‍ಆರ್‍ಪಿ-2

ಬೇಲೂರಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವೈದ್ಯರ ನಡೆ ಹಳ್ಳಿ

ಕಡೆ ವಾಹನಕ್ಕೆ ಜಿ.ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್

ಚಾಲನೆ ನೀಡಿದರು

Post a Comment

Previous Post Next Post