ಬೇಲೂರು : ಕೊವೀಡ್-19 ಕೇರ್ ಸೆಂಟರ್‍ಗೆ ಆಮ್ಲಜನಕ ಹಾಗೂ ಉಚಿತ ಆಂಬುಲೆನ್ಸ್ ನೀಡಲಾಯಿತು.
ಪಟ್ಟಣದ ಹನುಮಂತನಗರದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವೀಡ್-19 ಸೆಂಟರ್‍ಗೆ ಆಮ್ಲಜನಕ ಪೂರೈಕೆ ಮಾಡುವಂತಹ ಸಾಂದ್ರಕವನ್ನು ಹಾಗೂ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ರಾಷ್ಟ್ರಧರ್ಮ ಸಂಘಟನೆಯ ವತಿಯಿಂದ ನೀಡಲಾಯಿತು.
ವಾಹನವನ್ನು ತಹಶೀಲ್ದಾರ್ ಎನ್.ವಿ.ನಟೇಶ್ ಅವರಿಗೆ ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಕೆಂಚಾಂಬ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಸಂತೋಷ್ ಕೆಂಚಾಂಬ, ಇತ್ತೀಚಿನ ದಿನಗಳಲ್ಲಿ ಕೋವೀಡ್ ಎರಡನೆ ಅಲೆ ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರದ ಜೊತೆಗೆ ರಾಷ್ಟ್ರ ಧರ್ಮ ಸಂಘಟನೆ ಕೈ ಜೋಡಿಸುತ್ತಿದ್ದು ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಮನವಿ ಮೇರೆಗೆ ಕೋವೀಡ್ ಸೆಂಟರ್‍ನಲ್ಲಿ ಕೆಲವರಿಗೆ ಆಕ್ಸಿಜನ್ ಕೊರತೆ ಉಂಟಾಗುತ್ತಿರುವುದನ್ನು
ಮನಗೊಂಡು ಆಮ್ಲಜನಕ ಸಾಂದ್ರಕವನ್ನು ನಿಜಡಲಾಗುತ್ತಿದೆ.
ಇದರ ಜೊತೆ ಸಿಟಿಸ್ಕ್ಯಾನ್ ಮಾಡಿಸುವ ಉದ್ದೇಶದಿಂದ ನಮ್ಮ
ಸಂಘಟನೆಯ ವತಿಯಿಂದ ಮಾರುತಿ ವ್ಯಾನ್ ವಾಹನದ ವ್ಯವಸ್ಥೆ ಮಾಡಲಾಗುತ್ತಿದೆ.
ಕೇವಲ ಸಂಘಟನೆಗಳು ಮಾತ್ರ ಮಾಡಿದರೆ ಸಾಲದು,ಸಾರ್ವಜನಿಕರು ಸಹ ಕೈಜೋಡಿಸಬೇಕಿದೆ. ಈ ಸಾಂಕ್ರಾಮಿಕ ಕಾಯಿಲೆ ಬಗ್ಗೆ ಈಗಾಗಲೇ ತಾಲೂಕು ಆಡಳಿತ ಎಲ್ಲಾ ರೀತಿಯಲ್ಲೂ ಜಾಗೃತಿ ಮೂಡಿಸುತ್ತಿದೆ. ಆದರೆ ಸಾರ್ವಜನಿಕರು ಎಲ್ಲವನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಾರೆ. ಅದ್ದರಿಂದ ಪ್ರತಿಯೊಬ್ಬರೂ ತಾಲೂಕು ಆಡಳಿತದೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದು
ಮನವಿ ಮಾಡಿದರು.
ವೈಧ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಕೆಲವು ಸಂಘಟನೆಗಳು ಉಚಿತ ಆಂಬುಲೆನ್ಸ್ ವ್ಯವಸ್ಥೆ ಜೊತೆಗೆ ಆಕ್ಸಿಜನ್ ಕಾನ್ಸಟೆಂಟರ್ ನೀಡುತ್ತಿರುವುದರಿಂದ ಕೋವೀಡ್ ಕೇಂದ್ರಕ್ಕೆ ಬರುವಂತಹ ರೋಗಿಗಳಿಗೆ ಅನುಕೂಲವಾಗಲಿದೆ. ನಮ್ಮ
ಆಸ್ಪತ್ರೆಯಲ್ಲಿ ಕೋವೀಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು
ಹಾಸಿಗೆಗಳು ಭರ್ತಿಯಾಗಿದೆ. ಸಾರ್ವಜನಿಕರು ಮುಂಜಾಗ್ರತಾವಾಗಿ
ಆರೋಗ್ಯದ ಬಗ್ಗೆ ಹೆಚ್ಚಿನ ಬಗ್ಗೆ ನಿಗಾವಹಿಸಬೇಕು ಎಂದರು.
ತಹಶೀಲ್ದಾರ್ ಎನ್.ವಿ.ನಟೇಶ್ ಮಾತನಾಡಿ, ಸಂಘಟನೆಗಳು ನಮ್ಮ ತಾಲೂಕು ಆಡಳಿತದೊಂದಿಗೆ ತುರ್ತು ಸಂದರ್ಭದಲ್ಲಿ ಕೈ ಜೋಡಿಸುತ್ತಿರುವುದು ಶ್ಲಾಘನೀಯ.ದಿನದಿಂದ ದಿನಕ್ಕೆ ಕೋವೀಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಸರ್ಕಾರದ ಸುತ್ತೊಲೆ ಎಲ್ಲರೂ ಪಾಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಪಂಚಾಯಿತಿ ಉಪನಿರ್ದೇಶಕ ಸಂತೋಷ್, ಇಓ ರವಿಕುಮಾರ್, ಡಾ ನರಸೇಗೌಡ, ಪುರಸಭೆ ಸದಸ್ಯ ಪ್ರಭಾಕರ್, ರಾಷ್ಟ್ರಧರ್ಮ
ಸಂಘಟನೆಯ ರಾಘು,ಲೋಕೇಶ್ ,ಪುನೀತ್, ಇರ್ಫಾನ್ ಹಾಜರಿದ್ದರು.
26 ಬಿಎಲ್‍ಆರ್‍ಪಿ-3
ಬೇಲೂರಿನ ಗೆಂಡೇಹಳ್ಳಿ ರಸ್ತೆಯಲ್ಲಿರುವ ಕೋವಿಡ್-19
ಕೇಂದ್ರಕ್ಕೆ ರಾಷ್ಟ್ರಧರ್ಮ ಸಂಘಟನೆಯಿಂದ ಉಧ್ಯಮಿ
ಸಂತೋಷ್‍ಕೆಂಚಾಂಭ ಆಂಬ್ಯುಲೆನ್ಸ್ ವಾಹನ ಹಾಗೂ ಆಮ್ಲಜನಕ
ಸಾಂಧ್ರವನ್ನು ಕೊಡುಗೆಯಾಗಿ ನೀಡಿದರು
