ಹಾಸನ ಮೇ ೨೨ :- ಗ್ರಾಮಗಳ ಭಾಗದಲ್ಲಿ ಕೋವಿಡ್ ಸೋಂಕು ಹೆಚ್ಚು ತ್ತಿರುವ ಹಿನ್ನಲೆಯಲ್ಲಿ ತ್ವರಿತ ಹಾಗೂ ಪರಿಣಾಮಕಾರಿ ನಿರ್ವಹಣೆ ಮಾಡಬೇಕಿದೆ ಎಂದು ಉಪ ಮುಖ್ಯ ಮಂತ್ರಿ ಡಾ. ಆಶ್ವತ್ಥ್ ನಾರಾಯಣ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿAದು ನಡೆದ ಕೋವಿಡ್-೧೯ ನಿರ್ವಹಣೆ ಕುರಿತು ಜನಪ್ರತನಿಧಿಗಳು ಹಾಗೂ ಆಧಿಕಾರಿಗಳ ಸಭೆ ನಡೆಸಿದ ಅವರು ಹಳ್ಳಿಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಯಬೇಕು, ತಪಾಸಣೆ, ವರದಿಗಾರರಿಗೆ ಔಷಧಿ ವಿತರಣೆ, ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಆಮ್ಮಜನಕ ಬೇಡಿಕೆ ಪೂರೈಕೆಗೆ ಈಗಾಗಾಲೆ ಗಮನಹರಿಸಲಾಗಿದೆ. ಒಮ್ಮೆಲೇ ಬಳಕೆ ಹೆಚ್ಚಿದ ಕಾರಣ ಉತ್ಪಾದನೆ, ಸರಬರಾಜು, ಬಳಕೆಯಲ್ಲಿ ಸಮಸ್ಯೆ ತಲೆದೋರಿತ್ತು. ಹಾಲಿ ಬೇಡಿಕೆಗೆ ಸಮಾನಾದ ಪೂರೈಕೆಗೆ ಉತ್ತಮ ವ್ಯವಸ್ಥೆ ಮಾಡಲಾಗಿದೆ ಮಂದಿನ ದಿನಗಳಲ್ಲಿ ಜಿಲ್ಲೆಗೆ ಇನ್ನಷ್ಟು ಹೆಚ್ಚು ಆಮ್ಲಜನಕ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬಿಲ್ ಪಡೆದ ಪ್ರಕರಣಗಳಿದ್ದರೆ ಕ್ರಮ ಕೈಗೊಂಡು ಆಡಿಟರ್ ಮಾಡಿಸಿ ವಾಪಸ್ ಕೊಡಿಸಿ ಎಂದ ಸಚಿವರು ಜೊತೆಗೆ ೫೦ ವೆಂಟಿಲೇಟರ್ ಗಳನ್ನು ತ್ವರಿತವಾಗಿ ಪೂರೈಸಲಾಗುವುದು ರಾಜ್ಯದಲ್ಲಿ ಎಸ್.ಡಿ.ಆರ್.ಎಫ್ ನಿಧಿಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಒಟ್ಟು ೨೬೦ ಕೋಟಿ ಬಿಡುಗಡೆ ಮಾಡಲಾಗಿತ್ತು. ಸೋಮವಾರ ಹಾಸನ ಜಿಲ್ಲೆಗೆ ಮಾತ್ರ ೧೦ ಕೋಟಿ ಹಣ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ರಾಜ್ಯದಲ್ಲಿ ಶೀಘ್ರವಾಗಿ ೨೦೦೦ಕ್ಕೂ ಅಧಿಕ ವೈದ್ಯರ ನೇಮಕ ಮಾಡಲಾಗುತ್ತಿದೆ. ಕೋವಿಡ್ ತಪಾಸಣೆಗೆ ಮಿತಿಯಿಲ್ಲ ಎರಡನೇ ಅಲೆ ಸೋಂಕು ಹೆಚ್ಚು ವ್ಯಾಪಿಸುತ್ತಿದೆ ಆದರೆ ರಾಜ್ಯದಲ್ಲಿ ಸಾಕಷ್ಟು ಔಷಧಿ ದಾಸ್ತಾನು ಇದೆ ಎಲ್ಲಾ ಜಿಲ್ಲೆಗಳಿಗೂ ತಿಂಗಳಿಗೆ ಸಾಕಾಗುವಷ್ಟು ಪೂರೈಸಲಾಗುವುದು ಎಂದರು.
ಸೋAಕು ಹರಡುತ್ತಿರುವ ಕಾರಣ ಹೋಮ್ ಐಸೋಲೇಷನ್ ರದ್ದು ಪಡಿಸಲಾಗಿದೆ, ಎಲ್ಲರನ್ನೂ ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಸೋಂಕಿತರ ವಿವರ ಸಂಪೂರ್ಣ ನಮೂದಿಸಿ ಎಂದು ಡಾ. ಅಶ್ವತ್ ನಾರಯಣ್ ಹೇಳಿದರು.
ಎರಡನೇ ಡೋಸ್ ಬಾಕಿ ಇರುವವರಿಗೆ ನಿಗಧಿತ ಸಮಯದೊಳಗೆ ಲಸಿಕೆ ಪೂರೈಸಲಾಗುವುದು. ಉಳಿದ ಹೆಚ್ಚು ಜನಸಂಪರ್ಕ ಹೊಂದಿರುವ ೧೭ ವರ್ಗಕ್ಕೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು ಎಂದರು.
ಸಮುದಾಯ ಆರೋಗ್ಯ ಕೇಂದ್ರದಿAದ ಹಿಡಿದು ಎಲ್ಲಾ ಆಸ್ಪತ್ರೆಗಳಿಗೆ ಬೇಕಿರುವ ಮೂಲಭೂತ ಸೌಕರ್ಯವನ್ನು ಮೊದಲ ಆದ್ಯತೆಯೊಂದಿಗೆ ಹಂತ ಹಂತವಾಗಿ ನೀಡಲಾಗುವುದು, ಮೆಡಿಕಲ್ ಕಾಲೇಜುಗಳನ್ನು ಕಮಾಂಡ್ ಸೆಂಟರ್ ಮಾಡಿ ನಿರ್ವಹಣೆ ಮಾಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಮಾತನಾಡಿ ಜಿಲ್ಲೆಯ ಕೊರತೆಗಳನ್ನು ಪರಿಹರಿಸಿಕೊಡುವಂತೆ ಉಪಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.
ಜಿಲ್ಲೆಗೆ ೪-೫ ಕೆ.ಎಲ್ ಹೆಚ್ಚುವರಿ ಆಮ್ಮಜನಕ ಕೊಟಾ ನಿಗಧಿ ಮಾಡಿಕೊಡಿ, ಎಸ್ ಡಿ ಆರ್ ಎಫ್ ನಿಧಿಯಡಿ ೧೦ ಕೋಟಿ ಅನುದಾನ ಬಿಡುಗಡೆ ಮಾಡಿಕೊಡಿ ತುರ್ತಾಗಿ ೫೦ ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿ ಎಂದು ಮನವಿ ಮಾಡಿದರು.
ಶಾಸಕರಾದ ಹೆಚ್. ಡಿ ರೇವಣ್ಣ, ಹೆಚ್. ಕೆ ಕುಮಾರಸ್ವಾಮಿ, ಶಿವಲಿಂಗೇಗೌಡ, ಸಿ.ಎನ್ ಬಾಲಕೃಷ್ಣ, ಲಿಂಗೇಶ್, ಪ್ರೀತಮ್ ಜೆ ಗೌಡ ಹಾಗೂ ವಿಧಾನ ಪರಿಷತ್ ಸಂಸದರಾದ ಗೋಪಾಲಸ್ವಾಮಿ ಅವರು ಮಾತನಾಡಿ ತಾಲೂಕು ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್ ಪೂರೈಕೆ ಹೆಚ್ಚಿಸಿ ಅನುದಾನ ಒದಗಿಸಿ ಅಗತ್ಯ ಮತ್ತು ಔಷಧಿಗಳ ಖರೀದಿಗೆ ಅನುಮತಿ ನೀಡಿ ಎಂದು ಮನವಿ ಮಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹೋಮ್ ಐಸೋಲೇಷನ್ ಕಡ್ಡಾಯವಾಗಿ ನಿರ್ಧರಿಸಿ ಎಲ್ಲ ಸೋಂಕಿತರನ್ನು ಕೇಂದ್ರಕ್ಕೆ ಸ್ಥಳಾಂತರ ಮಾಡಿ ಎಂದು ಶಾಸಕರು ಕೋರಿದರು.
೩ ನೇ ಅಲೆಯಲ್ಲಾದರೂ ಸಂಕಷ್ಟ ಕಡಿಮೆ ಮಾಡಿಕೊಳ್ಳಲು ಜಿಲ್ಲೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರಿಗೂ ೨ ಡೋಸ್ ಕೋವಿಡ್ ಲಸಿಕೆ ಹಾಕಿಸಿ ಎಂದರು.
ಶಾಸಕರು ಪ್ರೀತಂ ಜೆ ಗೌಡ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳ ಪ್ಯಾಕೇಜ್ ಸೌಲಭ್ಯ ವ್ಯಾಪ್ತಿಗೆ ತರಬೇಕು ಎಂದು ಕೋರಿದರು
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಜಿಲ್ಲೆಗೆ ೧೫ ಕೆ.ಎಲ್ ಆಮ್ಲಜನಕವನ್ನು ನಿಗಧಿಪಡಿಸಿದೆ ನಿನ್ನೆಯಿಂದ ಬಾಕಿ ಇದ್ದು ೪ ಕೆ.ಎಲ್ ಆಮ್ಲಜನಕ ಪೂರೈಕೆಯಾಗುತ್ತಿದೆ. ಒಟ್ಟಾರೆ ಸುಮಾರು ೮೦೦ ಸಿಲಿಂಡರ್ ಉತ್ಪಾದನೆ ಮಾಡಬಹುದು ಇದು ಈಗಿನ ಬೇಡಿಕೆಗೆ ಸಹಕಾರಿಯಾಗಲಿದೆ ಎಂದರಲ್ಲದೆ ಆಮ್ಮಜನಕ ಬೆಡ್‌ಗಳ ಸಂಖ್ಯೆ ಹೆಚ್ಚಿಸಿದರೆ ರಾಜ್ಯದಿಂದ ಹೆಚ್ಚಿನ ಅಮ್ಮಜನಕ ಪೂರೈಕೆ ಬೇಕಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎ ಪರಮೇಶ ಅವರು ಮಾತನಾಡಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿವಾರು ರಚಿಸಿಲಾಗಿರುವ ಸಮಿತಿ ನಡೆಸಲಾಗುತ್ತಿರುವ ಪರೀಕ್ಷೆ ಕೈಗೊಂಡಿರುವ ಮುಂಜಾಗ್ರತೆ, ಮೇಲ್ವಿಚಾರಣೆ ವ್ಯವಸ್ಥೆ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಕವಿತ ರಾಜಾ ರಾಂ, ಉಪ ಕಾರ್ಯದರ್ಶಿ ಚಂದ್ರಶೇಖರ್, ಉಪವಿಭಾಗಾಧಿಕಾರಿ ಬಿ.ಎ ಜಗದೀಶ್ ಮತ್ತಿತರರು ಹಾಜರಿದ್ದರು.