ಕಾಂಗ್ರೆಸ್ ಮುಖಂಡ‌ ಬಾಗೂರು ಮಂಜೇಗೌಡರಿಂದ ಬಡವರಿಗೆ‌ ಆಹಾರ‌ ವಿತರಣೆ

ಹಾಸನ:  ಕೊರೋನಾ ವೈರಸ್  ಬಡವರ ಬದುಕಿನ‌ ಮೇಲೆ ಅಟ್ಟಹಾಸ‌‌ ಮೆರೆಯುತ್ತಿದೆ. ಇದರಿ‌ದ ಕೂಲಿಕರ‍್ಮಿಕರ ಬದುಕು‌ ಬೀದಿಗೆ ಬಿದ್ದಿದೆ. ಬಡವರ ಆಹಾರಕ್ಕಾಗಿ‌ ಹಾತೊರೆಯುತ್ತಿದ್ದಾರೆ. ವೈರಸ್ ತಡೆಯಲು‌ ಲಾಕ್ ಡೌನ್  ಒಳ್ಳೆಯ‌ ಅಸ್ತ್ರವಾಗಿದ್ದರೂ ಇದರಿಂದ ಅನೇಕರು ಊಟವಿಲ್ಲದೆ ಪರಿತಪ್ಪಿಸುತ್ತಿದ್ದಾರೆ.‌ಕೂಲಿಕರ‍್ಮಿಕರು, ಬಡವರು, ಅಸಾಹಯಕರು ಅನ್ನಕ್ಕಾಗಿ  ಕಷ್ಟಪಡುವಂತಾಗಿದೆ ಇಂತಹ‌ ಸಂರ‍್ಭದಲ್ಲಿ  ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಅವರ ನೆರವಿಗೆ ನಿಂತಿದ್ದು ನಿತ್ಯ ಆಹಾರ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.



ಹಾಸನ‌  ಸೇರಿದಂತೆ ಹೊಳೆನರಸೀಪುರ ‌ಪಟ್ಟಣದಲ್ಲಿ ಬಿ.ಪಿ.ಮಂಜೇಗೌಡ ‌ಅವರು ಆಹಾರ ವಿತರಣೆಗೆ ಮುಂದಾಗಿದ್ದಾರೆ.ಬಡವರು , ಕೂಲಿಕರ‍್ಮಿಕರು ‌ಇವರು ಸ್ಥಳಗಳನ್ನು ಗುರುತಿಸಿಕೊಂಡು ಅನೇಕ ದಿನಗಳಿಂದ ಆಹಾರ ವಿತರಣೆ ಮಾಡುವ ಮೂಲಕ ಬಡವರ ಹಸಿವು ನೀಗಿಸುತ್ತಿದ್ದಾರೆ. ಶುಕ್ರವಾರ ಹೊಳೆನರಸೀಪುರದ ವಿವಿಧ ಕಡೆಗಳಲ್ಲಿ ಆಹಾರ ವಿತರಣೆ ಮಾಡುವ ಮೂಲಕ ಕೋವಿಡ್ ಸಂಕಷ್ಟದಲ್ಲಿ ಜನರಿಗೆ ಕೈಜೋಡಿಸಿದ್ದಾರೆ. ಇವರ ಕರ‍್ಯಕ್ಕೆ ಸರ‍್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಡವರ ‌ಹಸಿವು‌ ನೀಗಿಸಲು ಸುಮಾರು ೧೫ಕ್ಕೂ‌ಹೆಚ್ಚು ‌ಜನರ‌‌ ತಂಡ ‌ಮಂಜೇಗೌಡ ಅವರ ಮರ‍್ಗರ‍್ಶನದಲ್ಲಿ ‌ಬಡವರ ಸೇವೆ‌‌ ಮುಂದಾಗಿದೆ.

  ಹೊಳೆನರಸೀಪುರ ಆಸ್ಪತ್ರೆ ಬಳಿ ರೋಗಿಗಳ ಸಂಬಂಧಿಕರಿಗೆ, ತರ‍್ತು ವಾಹನ ಚಾಲಕರಿಗೆ, ಆಶಾಕರ‍್ಯರ‍್ತರಿಗೆ ಹಾಗೂ ಕರ‍್ಮಿಕರಿಗೆ  ಹಾಗೂ ಅಲ್ಲಿನ ಸ್ಥಳೀಯ ಜನರಿಗೆ ಊಟ ವಿತರಣೆ ಮಾಡುತ್ತಿದ್ದಾರೆ. ಈ‌‌ ಸಂರ‍್ಭದಲ್ಲಿ  ದುದ್ದ ಬ್ಲಾಕ್ ಅಧ್ಯಕ್ಷ ವಿಶ್ವನಾಥ್  ಹೊಳೆನರಸೀಪುರ ಬ್ಲಾಕ್ ಅಧ್ಯಕ್ಷ ಹೊನ್ನಿಕೊಪ್ಪಲು ಮಂಜಣ್ಣ, ದುದ್ದ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಹರೀಶ್  ಹಾಗೂ ಮೇಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ‌,ಕಟ್ಟೆಪ್ರಕಾಶ್ ಹಾಗೂ  ಕಾಂಗ್ರೆಸ್ ಕರ‍್ಯರ‍್ತರು ಹಾಜರಿದ್ದರು.

Post a Comment

Previous Post Next Post