ಹಾಸನ: ಫ್ರೆಂಟ್ ಲೈನ್ ಕರೊನಾ ವಾರಿರ‍್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಹಾಸನ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನಕ್ಕೆ ಗುರುವಾರದಂದು ಬೆಲಿಗ್ಗೆ ಮಾಸ್ಕ್, ಹಾಗೂ ಸ್ಯಾನಿಟೈಸರ್ ಮತ್ತು ಸ್ಯಾನಿಟೈಸರ್ ಸ್ಟಾ÷್ಯಂಡ್ ಗಳನ್ನು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದಿಂದ ವಿತರಿಸಲಾಯಿತು.
ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಮತ್ತು ಸಂಘಟನೆ ಮುಖಂಡರಾದ ಸಂಗA ಅವರು ಮಾಧ್ಯಮದೊಂದಿಗೆ ಮಾತನಾಡಿ, ಕೊರೋನಾ ಆತಂಕದ ನಡುವೆಯೂ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪತ್ರಕರ್ತರು ನಮ್ಮ ದೇಶದ ಆಸ್ತಿ. ನಮ್ಮ ದೇಶದ ಅಂಗಾAಗಳಲ್ಲಿ ಪತ್ರಿಕಾ ರಂಗವು ಕೂಡ ಒಂದಾಗಿದೆ. ಹೆಚ್ಚಾಗಿ ಸಾವು-ನೋವುಗಳು ಸಂಭವಿಸುತ್ತಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಜೀವದ ಅಂಗನ್ನು ತೊರೆದು ಸಾರ್ವಜನಿಕರ ರಕ್ಷಣೆಗೆ ನಿಂತಿದ್ದಾರೆ. ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಮುಖ್ಯ. ಜಯ ಕರ್ನಾಟಕ ಸಂಘಟನೆಯಿAದ ಕೊರೋನಾದಿಂದ ದೂರ ಇರಲು ಜಾಗೃತಿಯಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜಯಕರ್ನಾಟಕ ಸಂಘಟನೆಯು ಸೇವೆಯಂತಹ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶಿ ಕೆ.ಜಿ. ಸುರೇಶ್, ಉಪಾಧ್ಯಕ್ಷ ಹಿಂದೂ ಪ್ರಕಾಶ್, ಜಯಕರ್ನಾಟಕ ಸಂಘಟನೆ ಗೌರವಾಧ್ಯಕ್ಷ ಕೆ.ಆರ್. ರಘು., ರಾಜ್ಯ ಸಂಚಾಲಕ ಉಮೇಶ್, ಬೇಲೂರು ತಾಲೂಕು ಅಧ್ಯಕ್ಷ ಎಸ್.ಎಂ. ರಾಜು, ಬೇಲೂರು ತಾಲೂಕು ಕಾರ್ಯಾಧ್ಯಕ್ಷ ಲಕ್ಷ÷್ಮಣ್, ಉಪಾಧ್ಯಕ್ಷ ಶ್ರೇಯಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ಮಲ್, ಯುವ ಘಟಕದ ಲೋಹಿತ್ ಇತರರು ಉಪಸ್ಥಿತರಿದ್ದರು.