ಹಾಸನ: ದೇವರು ಶಕ್ತಿ ಕೊಟ್ಟರೆ ಇನ್ನೆರಡು ವರ್ಷ ಬಿ.ಎಸ್. ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿ. ಇಂದು ಶುಕ್ರವಾರ ನಾಡಿನ ದೊರೆ ಹಾಸನಕ್ಕೆ ಬರುತ್ತಿದ್ದು, ಗೌರವದಿಂದ ಕಾಣಲು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೆ ನನಗೆ ಸೂಚನೆ ನೀಡಿರುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸಲ್ಪ ವಿನಯವಾಗಿ ಮಾತನಾಡಿ ಕೊನೆಯಲ್ಲಿ ಟಾಂಗ್ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರು ಶಕ್ತಿ ಕೊಟ್ಟರೇ ಯಡಿಯೂರಪ್ಪ ಅವರೆ ಇನ್ನು ೨ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲ್ಲಿ. ಹಾಸನಕ್ಕೆ ಬಂದಾಗ ಗೌರವ ಕೊಡುವುದು ನಮ್ಮ ಕರ್ತವ್ಯ. ಜಿಲ್ಲೆಯ ವಸ್ತುಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗೆ ಎಳೆ ಎಳೆಯಾಗಿ ಹೇಳುತ್ತೆನೆ. ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯ ಕೊವೀಡ್ ನಿಯಂತ್ರಣ ಸಭೆ ನಡೆಸಲು ಆಗಮಿಸುತ್ತಿದ್ದಾರೆ. ಈ ಹಿಂದೆ ೧೪೪ ಉಲ್ಲಘಂನೆ ಹಾಗುತ್ತೆ ನಾನೊಬ್ಬನೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಯವರ ಮನೆ ಮುಂದೆ ಧರಣಿ ಮಾಡಲು ನಿರ್ಧಾರ ಮಾಡಿದ್ದೆ .ಅದರೆ ಮುಖ್ಯಮಂತ್ರಿಗಳೆ ಪೋನ್ ಮಾಡಿ ಜಿಲ್ಲೆಯ ಕೆಲಸ ಮಾಡಿಸುವುದಾಗಿ ಭರವಸೆ ನೀಡಿದರು. ಅವರು ಭರವಸೆ ನೀಡಿದಂತೆ ಒಂದು ಕೆಲಸವು ಇನ್ನು ಆಗಿರುವುದಿಲ್ಲ. ೨೦೦೮ನೇ ಸಾಲಿನಿಂದ ೨೦೧೮ ರವರಗೆ ಬಿಜೆಪಿ ಜೆಡಿಎಸ್ ಸರ್ಕಾರ ದಶಕಗಳ ಕಾಲ ಅಧಿಕಾರದಲ್ಲಿದ್ದೆವು. ಚನ್ನಪಟ್ಟಣ ಮೇಲ್ಸೆತುವೆ ಕೆಲಸ ನಿಧಾನ. ಹಾಸನ ಮೆಡಿಕಲ್ ಕಾಲೇಜು ಬಾಗಿಲು ಮುಚ್ಚುವುದಾಗಿ ಹೇಳಿದರು. ಆದರೇ ಮಾಜಿ ಪ್ರಧಾನಿ ಹೋಗಿ ಕಾಲೇಜು ಮುಚ್ಚದಂತೆ ತಡೆದರು. ಇಂಜಿನಿಯರಿAಗ್ ಕಾಲೇಜಿನಲ್ಲಿ ೧೦ ವರ್ಷ ಯಾವ ಸರ್ಕಾರ ಮೂಲಭೂತ ಸೌಕರ್ಯ ನೀಡಲಿಲ್ಲ. ಪ್ರಥಮ ದರ್ಜೆ ಕಾಲೇಜಿಗಳಿಗೆ ಸೌಕರ್ಯ ಒದಗಿಸಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಅನುಧಾನ ನೀಡಿದ್ದೆವೆ. ಹೆಚ್.ಡಿ. ಕುಮಾರಸ್ವಾಮಿ ಕಾಲದಲ್ಲಿ ಜೆಡಿಎಸ್ ಕಾಂಗ್ರೆಸ್ ಶಾಸಕರಿಗೆ ನೀಡಿದ ಅನುದಾನ ತಡೆದರು. ಕಳೆದ ಬಾರಿ ಕೊರೊನಾ ನಿಯಂತ್ರಣ ಮಾಡಿದ್ದೆವು. ೨ನೆ ಅಲೆಯಲ್ಲಿ ಸರ್ಕಾರದ ಬೇಜಾಬ್ದಾರಿಯಿಂದ ಕೊರೊನಾ ಪ್ರಕರಣ ಸಾವು ನೋವು ಹೆಚ್ಚಾಗಿದೆ ಎಂದು ದೂರಿದರು. ಜನರು ಸಾಯುತ್ತಿದ್ದರೂ ರಾಜ್ಯದಲ್ಲಿ ಚುನಾವಣೆ ನಡೆಸಿದರು. ಎರಡು ರಾಷ್ಟಿçÃಯ ಪಕ್ಷದವರು ಈ ಕೆಲಸ ಮಾಡಿದರು. ಡಬಲ್ ಇಂಜಿನ್ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರು ರಾಜ್ಯದಲ್ಲಿ ೩೧ ಸಾವಿರ ಜನರು ಕೊರೊನಾದಿಂದ ಸಾವನಪ್ಪಿದ್ದಾರೆ. ಒಂದನೆ ಅಲೆಯಿಂದ ಇಲ್ಲಿವರೆಗೂ ಜಿಲ್ಲೆಯಲ್ಲಿ ೧೦೯೮ ಜನರು ಸಾವನಪ್ಪಿದ್ದಾರೆ. ಜಿಲ್ಲೆಯಲ್ಲಿ ೯೭೫೦ ಸಕ್ರಿಯ ಪ್ರಕರಣಗಳಿವೆ. ಜಿಲ್ಲಾಡಳಿತ ಕೊರೊನಾ ಸಾವಿನ ಪ್ರಕರಣ ಮುಚ್ಚಿಡಲಾಗುತ್ತಿದೆ. ಕೊರೊನಾ ವ್ಯಾಕ್ಸಿನೇಷನ್ಬ ಕಾಳಸಂತೆಕೊರರ ಜೊತೆ ಸೇರಿದೆ. ಸರಿಯಾಗಿ ವ್ಯಾಕ್ಸಿನೇಷನ್ ಮಾಡಿಲ್ಲ. ೨ನೇ ಆಲೆಗೆ ಆಕ್ಸಿಜನ್ ಪ್ರಿಪೆರ್ ಮಾಡಲಿಲ್ಲ. ಸುಪ್ರೀಂ ಕೋರ್ಟ್ ಚಾಟಿ ಎಟು ಹೊಡೆಯುವರೆಗು ಸರ್ಕಾರ ಎಚ್ಚೆಳಲಿಲ್ಲ ಎಂದು ಕುಟುಕಿದರು. ಇಂದು ಹಾಸನದಲ್ಲಿ ನಡೆಯುವ ಮುಖ್ಯ ಮಂತ್ರಿಗಳ ಸಭೆಗೆ ಪತ್ರಕರ್ತರನ್ನು ಸಭೆಗೆ ಸೇರಿಸುತ್ತಿಲ್ಲ. ಜಿಲ್ಲೆಯಲ್ಲಿ ಮಾಧ್ಯಮ ಎಮರ್ಜೆನ್ಸಿ ಶುರು ಮಾಡಿದರೆ. ನಾಳೆ ಮುಖ್ಯಮಂತ್ರಿ ಜೊತೆ ನಡೆಯುವ ಸಭೆಯಲ್ಲಿ ಮಾಧ್ಯಮದವರನ್ನು ಒಳ ಸೇರಿಸಲೇಬೆಕು.ಅವರ ಎದುರು ಜಿಲ್ಲೆಯ ಬಗ್ಗೆ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.
ಸಕಲೇಶಪುರ ಪಿಡಿಒ ಕೊರೊನಾದಿಂದ ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಆಸ್ಪತ್ರೆಗೆ ಕೊರೊನಾ ಚಿಕಿತ್ಸೆ ಪಡೆಯಲು ಹಣ ನೀಡಲಾಗದೆ ಮನೆಯಲ್ಲಿ ಜನ ಸತ್ತು ಬಿದ್ದಿದ್ದಾರೆ. ರಾಜ್ಯದ ದೊರೆ ಮುಖ್ಯಮಂತ್ರಿ ಹಾಸನ ಜಿಲ್ಲೆಗೆ ಬರುತ್ತಿದ್ದಾರೆ ಅವರಿಗೆ ಕೊಡುವ ಗೌರವವನ್ನು ಕೊಡುತ್ತೆವೆ ಎಮದು ಟಾಂಗ್ ನೀಡಿದರು. ಕೊರೊನಾ ರಾಷ್ಟಿçÃಯ ವಿಪತ್ತು ಅಂತ ಘೋಷಣೆ ಮಾಡಿದೆ .ಕೊರೊನಾದಿಂದ ನಿಧನರಾಗಿರುವ ಬಿಪಿಎಲ್ ಕಾರ್ಡ್ ದಾರರಿಗೆ ಕೇಂದ್ರ ಸರ್ಕಾರದಿಂದ ೫ ಲಕ್ಷ ರಾಜ್ಯ ಸರ್ಕಾರದಿಂದ ೧ ಲಕ್ಷ ಕೊಡಿ ಎಂದು ಆಗ್ರಹಿಸುತ್ತೆನೆ. ನೆನ್ನಯಿಂದ ವಿದ್ಯುತ್ ಪೆಟ್ರೋಲ್ ಬೇಲೆ ಜಾಸ್ತಿಯಾಗಿದೆ. ರಾಜ್ಯ ಸರ್ಕಾರ ಇಂಧನ .ನೀರಾವರಿ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ. ಸರ್ಕಾರದಲ್ಲಿ ಹೇಳುವರು ಕೇಳುವರು ಯಾರು ಇಲ್ಲ. ಜಿಲ್ಲೆಯ ಜನರಿಗೆ ಆಲೂಗಡ್ಡೆ ಸಬ್ಸಿಡಿ. ಜಿಲ್ಲೆಯ ನೀರಾವರಿ ಕಾಮಾಗಾರಿ ಈ ಸರ್ಕಾರ ತಡೆಹಿಡಿದಿದೆ. ಹಾಸನ ಜಿಲ್ಲೆಗೆ ಲಸಿಕೆ ಕೊಡದೆ ಉತ್ತರ ಕರ್ನಾಟಕದ ಜನತಿಗೆ ಬಿಜೆಪಿ ಪಕ್ಷಕ್ಕೆ ಮತ ನಿಡುತ್ತಾರೆ ಎಂದು ಹೆಚ್ಚು ಲಸಿಕೆ ಕೊಡುತ್ತಿದ್ದಾರೆ. ಮೊನ್ನೆ ಅವರ ಮುಖಕ್ಕೆ ಎಳಿದ್ದೆ. ನಾನು ನಾಳೆ ಎಲ್ಲಾ ಪತ್ರಿಕೆಯರ ಎದುರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅವರ ಮುಖಕ್ಕೆ ಹೇಳುತ್ತೇನೆ. ಎಂದು ಮಾತನಾಡಿದರು
ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಲಿಂಗೇಶ್, ಸಿ.ಎನ್. ಬಾಲಕೃಷ್ಣ, ಹೆಚ್.ಕೆ. ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.