ರೈಲ್ವೆ ಸಲಹಾ ಮಂಡಳಿಗೆ ಹಾಸನದ ಜಗದೀಶ್ ನೇಮಕ

ಹಾಸನ: ಕನ್ನಡಿಗ ಜಗದೀಶ್ ಕಾಟೀಹಳ್ಳಿ ಸಿಂಗ್ರಿಗೌಡ ಅವರು ಭಾರತೀಯ ರೈಲ್ವೆ ಮಂಡಳಿಯ ನೈರುತ್ಯವಲಯದ ಸಲಹಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. 



 ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪರಿಣಿತರಾಗರುವ ಜಗದೀಶ್ ಉದ್ಯಮಿಯೂ ಹೌದು. ಮುಂದಿನ ಅವಧಿಗೆ ಜಗದೀಶ್ ಕಾಟೀಹಳ್ಳಿ ಸಿಂಗ್ರಿ ಗೌಡರನ್ನು ನೇಮಕ ಮಾಡಿ ಭಾರತೀಯ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ಇದೇ ಮೊದಲ ಬಾರಿಗೆ ಹಾಸನ ಜಿಲ್ಲೆಯವರಿಗೆ ರೈಲ್ವೆ ಮಂಡಳಿಯಲ್ಲಿ ಪ್ರಾತಿನಿದ್ಯ ಸಿಕ್ಕಿದ್ದು, ಕರ್ನಾಟಕ ರಾಜ್ಯದಲ್ಲಿ ನೆನಗುದಿಗೆ ಬಿದ್ದಿರುವ ಹತ್ತು-ಹಲವು ಕಾಮಗಾರಿಗಳು ಮತ್ತು ಹೆಚ್ಚು ರೈಲ್ವೆ ಮಾರ್ಗಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಇವರು ಮಹತ್ವದ ಪಾತ್ರ ವಹಿಸಿ, ರಾಜ್ಯಕ್ಕೆ ಅತೀ ಹೆಚ್ಚು ರೈಲ್ವೆ ಸೌಲಭ್ಯಗಳು ದೊರೆಯುವಂತಾಗಲಿ ಎಂದು ನಿರೀಕ್ಷಿಸಲಾಗಿದೆ.

Post a Comment

Previous Post Next Post