ರಾಜ್ಯದಲ್ಲಿ ಟ್ರಾನ್ಸ್ಜೆಂಡರ್ ಗಳಿಗೆ ಶೇ.೧ ರಷ್ಟು ಮೀಸಲಾತಿ

ಹಾಸನ: ಕರ್ನಾಟಕ ರಾಜ್ಯದಲ್ಲಿ ಟ್ರಾನ್ಸ್ಜೆಂಡರ್ ಗಳಿಗೆ ಶೇಕಡ ೧ ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಿರುವ ಸರಕಾರದ ನಿರ್ಧಾರಕ್ಕೆ ಸ್ವಾಗತಿಸುವುದಾಗಿ ಪ್ರಕೃತಿ ಸಮುದಾಯ ಸೇವಾ ಸಮಿತಿ ಅಧ್ಯಕ್ಷೆ ವರ್ಷ ಮತ್ತು ಸಂಗಮದ ಅಧಿಕಾರಿ ಅಶ್ವಿನಿ ಸಂತೋಷವ್ಯಕ್ತಪಡಿಸಿದರು.



       ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡುತ್ತಾ, ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಟ್ರಾನ್ಸ್ಜೆಂಡರ್ ಗಳಿಗೆ  ಶೇಕಡ ೧ರಷ್ಟು ಮೀಸಲಾತಿ ನೀಡುವಂತೆ ಕರ್ನಾಟಕ ಸರ್ಕಾರವನ್ನು ಸಂಗಮ ಸಂಸ್ಥೆಯು ಒತ್ತಾಯಿಸಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯವನ್ನು ಹೂಡಿತ್ತು. ಈ ಮನವಿಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ ಮೀಸಲಾತಿ ನೀಡುವುದಾಗಿ ಘೋಷಿಸಿರುವುದನ್ನು ಸಂಗಮ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದೆ. ಸಂಗಮ ಸಂಸ್ಥೆಯು ಕಳೆದ ಎರಡು ದಶಕಗಳಿಂದಲೂ ಟ್ರಾನ್ಸ್ಜೆಂಡರ್   ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರು, ಹೆಚ್‌ಐವಿ ಪೀಡಿತರು (ಪಿ.ಎಲ್.ಹೆಚ್.ಐ.ವಿ.) ಹಾಗೂ ನಗರ ಬಡವರೊಂದಿಗೆ ಕಲಸ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ ಎಂದರು. ಟ್ರಾನ್ಸ್ಜೆಂಡರ್ ಗಳಿಗೆ  ಸಂಬಂಧಪಟ್ಟಂತೆ  ಭಾರತದ ಸರ್ವೋಚ್ಛ ನ್ಯಾಯಾಲಯದ ಎನ್‌ಎಎಲ್‌ಎಸ್‌ಎ ತೀರ್ಪನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಂತೆ ಕೋರಿ ಸಂಗಮ ಸಂಸ್ಕ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಕಟ್ಟಳೆಯನ್ನು ( ಪಿಐಎಲ್ ) ಹೂಡಿತ್ತು. ಎನ್‌ಎಎಲ್‌ಎಸ್‌ಎ ತೀರ್ಪಿನ ಲಾಭಗಳು ಅರ್ಹ ಸಮುದಾಯಗಳಿಗೆ ತಲುಪದೇ ಇರುವ ಕಾರಣದಿಂದಾಗಿ ಸಂಗಮ ಹಾಗೂ ನಿಶಾ ಗುಳೂರ್ ಅವರು ವಿಶೇಷ ಮೀಸಲು ಕಾನ್ಸ್ಟೇಬಲ್ ಪಡೆ ಹಾಗೂ ಬ್ಯಾಂಡ್‌ಮನ್ ವರ್ಗದಡಿ ೨೪೬೭ ಹುದ್ದೆಗಳಿರುವುದನ್ನು ಮನಗೊಂಡು  ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ೨೦ನೇ ಜೂನ್ ೨೦೨೦ ರಂದು ಪಿಐಎಲ್ ಡಬ್ಲೂ.ಪಿ. ಸಂಖ್ಯೆ  ೮೫೧೧ /೨೦೨೦ (ಇಡಿಎನ್ - ಅರ್‌ಇಎಸ್)ನ್ನು ಹಿರಿಯ ವಕೀಲರಾದ ಬಿ.ಟಿ. ವೆಂಕಟೇಶ್ ಅವರ ಪ್ರಾತಿನಿಧ್ಯದಡಿ ಹೂಡಿತು. ಕರ್ನಾಟಕ ಸರ್ಕಾರ ವಿಶೇಷ ಅಭಿಯಾನದಡಿ ಸಾವಿರಾರು ಜನರನ್ನು ನೇಮಕ ಮಾಡುತ್ತಿತ್ತು ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಸರ್ಕಾರವು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಶುಕ್ರವಾರ ಒಂದು ಮಮೋ ಸಲ್ಲಿಸಿದ್ದು, ಜನರಲ್ ಮೆರಿಟ್ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳಡಿ ಟ್ರಾನ್ಸೆ÷್ಜಂಡರ್‌ಳಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇಕಡ ೧ ರಷ್ಟು ಮೀಸಲಾತಿ ನೀಡುವುದಾಗಿ ತಿಳಿಸಿದೆ. ೨೦೨೧ ರ ಮೇ ೧೩ ರಂದು ಈ ಅಧಿಸೂಚನೆಯನ್ನು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಶುಕ್ರವಾರ ಸಲ್ಲಿಸಲಾಯಿತು. ಒಂದು ವೇಳೆ ಅರ್ಹ ಅಭ್ಯರ್ಥಿಗಳು ಇಲ್ಲದಿದ್ದರೆ ಮೀಸಲಿರುವ ಹುದ್ದೆಗಳು ಸಂಬಂಧಪಟ್ಟ ಮೀಸಲಾತಿ ವರ್ಗದಡಿ ಇರುವ ಇತರೆ ಅರ್ಹ ಅಭ್ಯರ್ಥಿ ಗಳಿಗೆ ಲಭಿಸುತ್ತದೆ ಎಂದು ಹೇಳಿದರು.

      ಪತ್ರಿಕಾಗೋಷ್ಠಿಯಲ್ಲಿ ಸಂಗಮ ಕೋ-ಆಡಿಟರ್ ಅಶ್ವಥ್, ಸ್ವಪ್ನ, ಸುಷ್ಮಾ ಇತರರು ಉಪಸ್ಥಿತರಿದ್ದರು.


Post a Comment

Previous Post Next Post