ಅರಕಲಗೂಡು: ಗುರುಕುಲದಂತಹ ಭದ್ರ ಬುನಾದಿ ಆಧುನಿಕ ಶಿಕ್ಷಣದಿಂದ ಶಿಷ್ಯರಿಗೆ ಸಿಗುವುದಿಲ್ಲ ಎಂದು ಡಾ. ಆರ್.ಕೆ.ಪದ್ಮನಾಭ ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸೋಮವಾರ ಸಂಜೆ ಆಯೋಜಿಸಿದ್ದ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಕಾಲದಲ್ಲಿ ಸಂಗೀತ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಒಂದು ಕೃತಿ ಕಲಿಯಲು ವಿಧ್ವಾಂಸರ ಮನೆಗೆ ೨ ತಾಸು ನಡೆದು ಸಾಗಬೇಕಿತ್ತು. ಕೆಲವೊಮ್ಮೆ ಗುರುಗಳು ಮನೆಯಲ್ಲಿದ್ದರೂ ಇಲ್ಲ ಎಂದು ಹೇಳುತ್ತಿದ್ದರು. ಅದನ್ನು ಕಂಡು ಬಹಳ ನೋವಾಗುತ್ತಿತ್ತು ಎಂದು ತಮ್ಮ ಅನುಭವ ಹಂಚಿಕೊAಡರು.
ಕಷ್ಟದ ದಿನಗಳಲ್ಲಿ ಕಲಿತ ವಿದ್ಯೆಯನ್ನು ನೂರು ವರ್ಷವಾದರೂ ಮರೆಯಲಾಗದು. ಆದರೆ ಈಗಿನ ಕಾಲಘಟ್ಟದಲ್ಲಿ ಮೊಬೈಲ್ನಲ್ಲಿ ಸಾವಿರಾರು ಕೃತಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಅವಕಾಶಗಳಿಗೆ, ಧ್ವನಿ ಮುದ್ರಣ, ತಾಂತ್ರಿಕ ಚೇತರಿಕೆ ಆಗಿದೆ. ಇಷ್ಟೆಲ್ಲ ಇದ್ದರೂ ಗುರುಕುಲದಲ್ಲಿ ಕಲಿಯುತ್ತಿದ್ದ ಶಿಷ್ಯರಿಗೂ, ಈಗಿನ ವಿದ್ಯಾರ್ಥಿಗಳಿಗೂ ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟರು.
ಶಾಸ್ತಿçÃಯ ಸಂಗೀತಕ್ಕೂ ಜನಪದವೇ ಮೂಲ:
ಶಾಸ್ತಿçÃಯ ಸಂಗೀತದ ಪರಂಪರೆ ಬೆಳೆದಿದ್ದೇ ಜನಪದ ಕಲೆಯಿಂದ ಎಂಬುದಕ್ಕೆ ಸಾಕ್ಷಿಗಳಿವೆ. ಎಲ್ಲ ಸಂಗೀತಕ್ಕೂ ಜಾನಪದವೇ ಮೂಲ ಎಂಬುದು ಎಂದೂ ಅಳಿಸದ ಸಿದ್ಧಂತವಾಗಿದೆ. ಮೂಲ ಧಾಟಿಗಳಿಗೆ ಶಾಸ್ತಿçÃಯ ಲೇಪ ಮಾಡಿದ್ದರಿಂದ ಸಂಗೀತದ ಮತ್ತೊಂದು ಪ್ರಾಕಾರ ಹುಟ್ಟಿಕೊಂಡಿತ್ತು. ಆಗಿನ ಜನಪದವನ್ನು ಜನರು ಒಪ್ಪಿಕೊಂಡರೂ ಶಾಸ್ತಿçÃಯ ಸಂಗೀತದಿAದ ದೂರ ಉಳಿದಿರುವುದು ವಿಪರ್ಯಾಸ. ಇಂತಹ ಬೆಳವಣಿಗೆ ಸರಿಯಲ್ಲ ಎಂದರು.
ಎಲ್ಲರನ್ನೂ ಕರಗಿಸಬಲ್ಲ ಶಕ್ತಿ ಹೊಂದಿರುವ ಸಂಗೀತಕ್ಕೆ ಜಾತಿ, ಧರ್ಮದ ಭೇದವಿಲ್ಲ. ಜಗತ್ತನ್ನೇ ಗೆಲ್ಲುವ ಸತ್ವ ಅದರಲ್ಲಿ ಅಡಕವಾಗಿದೆ. ಇದೇ ತತ್ವದಲ್ಲಿ ರುದ್ರಪಟಟ್ಣದ ಸಂಗೀತ ಪರಂಪರೆ ಮುಂದೆ ಸಾಗಿದೆ. ಸುಗಮ ಸಂಗೀತ ಕರ್ನಾಟಕದ ಹೆಮ್ಮೆಯ ಕೊಡುಗೆ. ಮನೋಧರ್ಮ ಅಲ್ಲಿ ಕೆಲಸ ಮಾಡುತ್ತದೆ. ಸಾವಿರಾರು ಕಲಾವಿದರನ್ನು ಪರಿಚಯಿಸಿದ ಅಂತಹ ಪ್ರಕಾರ ನಮ್ಮ ನಾಡಿನ ಕೊಡುಗೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಧಾನ ಸಂವಾದಕ ಅರಕಲಗೂಡು ಜಯಕುಮಾರ್ ಭಾಗವಹಿಸಿದ್ದರು. ಎಂ.ಮಹೇಶ್, ಜಮೀರ್ ಕೊಣನೂgರಿ೮, ಡಿ.ಜಯರಾಂ, ಗೊರೂರು ಶಿವೇಶ್, ಶ್ರುತಿ ಕಾಮಸಮುದ್ರ, ಭಾರತೀ ಹಾದಿಗೆ ಇತರರು ಪ್ರಶ್ನೆಗಳನ್ನು ಕೇಳಿದರು. ಶರಣ ಸಾಹಿತ್ಯ ಪರಿಷತ್ನ ಕುಮಾರಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಎಚ್.ಎಲ್.ಮಲ್ಲೇಶಗೌಡ, ಎಂ.ಎಲ್.ವಿಷ್ಣು ಪ್ರಕಾಶ್, ಗಂಗಾಧರ ಬಂಡಿಹಳ್ಳಿ, ಚಂದ್ರಶೇಖರ್ ಇತರರು ಭಾಗವಹಿಸಿದ್ದರು.
Tags
ಹಾಸನ