ಬಿಜೆಪಿ ಅಧಿಕಾರವಧಿಯಲ್ಲಿ ಹಾಸನದ ಸಮಗ್ರ ಅಭಿವೃದ್ಧಿ : ಗೋಪಾಲಯ್ಯ

 ಹಾಸನ :​ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಅವರು ರಾಜ್ಯ ಸರ್ಕಾರಗಳ ಬೆನ್ನು ಬಿದ್ದು ಕ್ಷೇತ್ರಕ್ಕೆ ಕೋಟ್ಯಾಂತರ ರೂಗಳ ಅನುದಾನ ತಂದಿದ್ದಾರೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ತುಂಬಾ ಕಾಳಜಿ ವಹಿಸಿ ಸೌಲಭ್ಯ ತಂದಿದ್ದಾರೆ ಎಂದು ಸಹಕಾರ ಸಚಿವರಾದ ಸೋಮಶೇಖರ್ ಬಣ್ಣಿಸಿ ಶ್ಲಾಘನೆವ್ಯಕ್ತಪಡಿಸಿದರು.

​ ​ ​ ​ ​ ​ ​ ​ ​ ​ ನಗರದ ಡೈರಿ ವೃತ್ತದ ಬಳಿ ಇರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಫಲಾನುಭವಿಗಳ ಸಮಾವೇಶ ಮತ್ತು ವಿವಿಧ ಇಲಾಖೆಗಳ​ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರೀತಂ ಗೌಡ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆನ್ನು ಬಿದ್ದು ಅಪಾರ ಅನುದಾನ ತಂದಿದ್ದಾರೆ. ಸಹಕಾರ ಸಂಘಗಳ ಮೂಲಕ ರೈತರಿಗೆ ನೆರವು ಒದಗಿಸಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು .​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ಯಶಸ್ವಿನಿ ಯೋಜನೆ ರದ್ದಾಗಿತ್ತು. ಬಜೇಟ್ ನಲ್ಲಿ ಘೊಷಣೆ ಮಾಡಿ​ ಸುಮಾರು 35 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ.​ ಯಡಿಯೂರಪ್ಪ ಅವರು ಶಾಸಕ ಪ್ರೀತಂ ಜೆ ಗೌಡ ಯಾವುದೇ ಅನುದಾನ ಕೇಳಿದರು ಮಂಜೂರಾತಿ ಮಾಡಿಕೊಟ್ಟಿದ್ದಾರೆ. ಪ್ರೀತಂ ಜೆ. ಗೌಡ ವಿಧಾನಸಭೆ ಅಧಿವೇಶನದಲ್ಲಿ ರಾಜಕೀಯ ಹೊರತುಪಡಿಸಿ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತಾರೆ.


ಸಹಕಾರ ಸಂಘದಲ್ಲಿ ರೈತರು ಪಡೆದ 97% ರಷ್ಟು ಸಾಲ ವಾಪಸು ಕೊಡುತ್ತಿದ್ದಾರೆ. ಸಹಕಾರಿ ಸಂಘಗಳು ಸಾಲ ಕೊಡುವುದು ಸಾಲ ವಸೂಲಿ ಮಾಡುವುದು ಅಲ್ಲ ಸ್ಥಳೀಯ ಶಾಸಕರು ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಇದೆ ಎಂದು ಹೇಳಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಹಾಗೂ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆಗೆಗಳನ್ನು ನೀಡಿದ್ದು ಎಲ್ಲಾ ಇಲಾಖೆಗಳಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿವೆ, ಬಡವರ, ರೈತರ, ಕೂಲಿ ಕಾರ್ಮಿಕರ ಪರ ಬಿಜೆಪಿ ಸರಕಾರದ ಅವಧಿಯಲ್ಲಿ ಹಾಸನ ಜಿಲ್ಲೆಯು ಸಮಗ್ರ ಅಭಿವೃದ್ದಿ ಕಂಡಿದೆ ಎಂದರು.
ಕೋವಿಡ್ ಸಂಧರ್ಭದಲ್ಲಿಯು​ ಜನರು ಹಸಿವಿನಿಂದ ಇರಬಾರದು ಎಂಬ ದೃಷ್ಟಿಯಿಂದ ಪಡಿತರ ಮೂಲಕ ನೀಡಲಾಗುವ ಆಹಾರ ಪದಾರ್ಥಗಳನ್ನು ಹೆಚ್ಚಿಸಿ ವಿತರಿಸುವ ಮೂಲಕ ಕೆಲಸವನ್ನು ಸರಕಾರ ಮಾಡಿದೆ, ಹಾಸನ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಸಹಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಿದೆ ಎಂದರು.​ ​ ​ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಹಾಗೂ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆಗೆಗಳನ್ನು ನೀಡಿದ್ದು ಎಲ್ಲಾ ಇಲಾಖೆಗಳಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿವೆ, ಬಡವರ, ರೈತರ, ಕೂಲಿ ಕಾರ್ಮಿಕರ ಪರ ಬಿಜೆಪಿ ಸರಕಾರದ ಅವಧಿಯಲ್ಲಿ ಹಾಸನ ಜಿಲ್ಲೆಯು ಸಮಗ್ರ ಅಭಿವೃದ್ದಿ ಕಂಡಿದೆ ಎಂದರು.

ಕೋವಿಡ್ ಸಂಧರ್ಭದಲ್ಲಿಯು​ ಜನರು ಹಸಿವಿನಿಂದ ಇರಬಾರದು ಎಂಬ ದೃಷ್ಟಿಯಿಂದ ಪಡಿತರ ಮೂಲಕ ನೀಡಲಾಗುವ ಆಹಾರ ಪದಾರ್ಥಗಳನ್ನು ಹೆಚ್ಚಿಸಿ ವಿತರಿಸುವ ಮೂಲಕ ಕೆಲಸವನ್ನು ಸರಕಾರ ಮಾಡಿದೆ, ಹಾಸನ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಸಹಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಿದೆ ಎಂದು ಹೇಳಿದರು.
​ ​ ​ ​ ​ ​ ​ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಶಾಸಕ ಪ್ರೀತಂ ಜೆ ಗೌಡ ಮಾತನಾಡಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೇಶದ 130 ಕೋಟಿ ಜನರು ಅದರ ಫಲಾನುಭವಿಗಳು.
ಕೊವಿಡ್ ಸಮಯದಲ್ಲಿ ಪ್ರದಾನಿ ನರೇಂದ್ರ ಮೋದಿ ಒಂದು ರುಪಾಯಿ ಪಡೆಯದೆ ಕೊವಿಡ್ ವ್ಯಾಕ್ಸಿನೇಷನ್‌ ಕೊಡಿಸಿ ನಮ್ಮ ಆರೋಗ್ಯ ಕಾಪಾಡಿದ್ದಾರೆ ಅದು ನಮ್ಮ ಕೇಂದ್ರ ಸರ್ಕಾರ ದೇಶದ ಜನರಿಗೆ ಕೊಟ್ಟಿರುವ ಕೊಡುಗೆ .

100 ರುಪಾಯಿಗೆ ಕೇಂದ್ರ ಸರ್ಕಾರದ ಯೋಜನೆ ಹಣ ರಾಜ್ಯ ಸರ್ಕಾರಗಳಿಗೆ ನೀಡಿದರೆ ಅದು ಜನರಿಗೆ ತಲುಪುವುದು ಕೇವಲ 18 ರೂಪಾಯಿಗಳು.
ಪ್ರಧಾನಿ ನರೇಂದ್ರ ಮೋದಿ ಮೊದಲ ಯೋಜನೆ ಜನದನ್ ಯೋಜನೆಯ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ದೃಷ್ಟಿಯಲ್ಲಿ ಪ್ರತಿ ನಾಗರಿಕರ ಬ್ಯಾಂಕ್ ಖಾತೆ ತೆರೆದಾಗ ಅವರ ಖಾತೆಗೆ ಸರ್ಕಾರಿ ಯೋಜನೆಗಳ ಹಣ ನೇರವಾಗಿ ಅವರ ಖಾತೆಗೆ ತಲುಪುವಂತೆ ಮಾಡುತ್ತಿದ್ದಾರೆ ಎಂದರು.ರೈತರ ಮಕ್ಕಳು ರೈತರಿಂದ ಅಧಿಕಾರಕ್ಕೆ ಅನೇಕ ಜನರು ಮುಖ್ಯಮಂತ್ರಿ ಪ್ರಧಾನಿ ಯಾಗಿ​ ಹೋದರು.
​ ಆದರೆ ರೈತರ ಖಾತೆಗೆ ನೇರವಾಗಿ ಕೃಷಿ ಸಮ್ಮಾನ್ ಯೋಜನೆಯಡಿ 6 ಸಾವಿರ ನೀಡಿದ ಮತ್ತೊಬ್ಬ ನಾಯಕ ಇದ್ರೆ ಯಡಿಯೂರಪ್ಪ ಎಂದು ನೆನಪಿಸಿದರು.
ಜಲಜೀವನ್ ಮಿಷನ್ ಅಡಿ ಹಾಸನ‌ ಜಿಲ್ಲೆಗೆ 2500 ಕೋಟಿ ಅಡಿ ಪ್ರತಿ ಗ್ರಾಮದ ಪ್ರತಿ ಮನಗೆ ನದಿ ನೀರಿನ ವ್ಯವಸ್ಥೆ ಮಾಡಿದ್ದಾರೆ ಇದು ನಮ್ಮ ಸರ್ಕಾರ. ಪ್ರೀತಂ ಜೆ ಗೌಡ ಆಕಸ್ಮಿಕ ಶಾಸಕ ಎಂದವರಿಗೆ ಇದೆ ವೇಳೆ ಭಾಷಣದಲ್ಲಿ ಜರಿದರು.
ಮೊದಲ ಬಾರಿಗೆ ಶಾಸಕನಾದರು ಮೂರು ನಾಲ್ಕು ದಶಕಗಳಿಂದ ನಡೆಯದ ಕೆಲಸ ಮಾಡಿದ್ದೆನೆ.
ರಿಂಗ್ ರಸ್ತೆ, ಯುಜಿಡಿ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾನೆ. 224 ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನವನ್ನು ಸಾಮಾನ್ಯ ಶಾಸಕನ್ನಾಗಿ ತಂದಿದ್ದೆನೆ ಎಂದರು.
ನನ್ನ ಕ್ಷೇತ್ರದಲ್ಲಿ ಕೆವಲ 10 ಪರ್ಸೇಂಟ್ ಕೆಲಸ ಮಾತ್ರ ಬಾಕಿ ಇದೆ . ಮುಂದಿನ ದಿನಗಳಲ್ಲಿ ವ್ಯವಸ್ಥಿತವಾದ ಶಿಕ್ಷಣ ಕ್ಷೇತ್ರದ ಕಡೆ ಗಮನ ಹರಿಸುತ್ತೆನೆ ಎಂದು ವಿಶ್ವಾಸವ್ಯಕ್ತಪಡಿಸಿದರು.​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​
​ ​ ​ ​ ​ ​ ​ ​ ​ ​ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ವಿಧಾನ ಪರಿಷತ್ ಸದಸ್ಯ ಮುನಿರಾಜೇಗೌಡ, ಜಿಲ್ಲಾಧಿಕಾರಿ ಎಂ.ಎಸ್ ಅರ್ಚನ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ,
ಎಸ್ಪಿ ಹರೀರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಆನಂದ್, ನಗರಾಭೆ ಅಧ್ಯಕ್ಷ ಆರ್.ಮೋಹನ್, ಹಿಮ್ಸ್ ನಿರ್ದೆಶಕ ಬಿ.ಸಿ. ರವಿಕುಮಾರ್ ಉಪ ವಿಭಾಗಾಧಿಕಾರಿ ಕೃಪಾಲಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

Previous Post Next Post