ಹಾಸನ, ಮೇ, 26: ಹಾಸನ ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿದ ಬೊಬ್ಬೆರೆಯುವ ಮೂಲಕ ದೊಡ್ಡ ದೊಡ್ಡ ಅನಾಹುತಗಳನ್ನೇ ಸೃಷ್ಟಿಸಿದ್ದಾನೆ. ಹೀಗೆ ಭಾರಿ ಮಳೆಯಿಂದ ದೇವೇಗೌಡನಗರ, ಕೃಷ್ಣಾನಗರದಲ್ಲಿ ಅಪಾರ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ, ಮನೆಯವರಿಗೆ ಸ್ವರೂಪ್ ಪ್ರಕಾಶ್ ಸಾಂತ್ವನ ಹೇಳಿದ್ದಾರೆ. ಭಾನುವಾರ ರಾತ್ರಿ ಸುರಿದ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿ ಸಾಕಷ್ಟು ಹಾನಿಯುಂಟಾಗಿತ್ತು. ಹೀಗೆ ಹಾಸನ ತಾಲೂಕಿನಾದ್ಯಂತ 60ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಆದ್ದರಿಂದ ಸೂಕ್ತವಾದ ಪರಿಹಾರ ಕೊಡಿಸುತ್ತೇನೆ ಎಂದು ಸ್ವರೂಪ್ ಪ್ರಕಾಶ್ ಅವರು ಭರವಸೆ ನೀಡಿದರು.
ಇನ್ನು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸ್ವರೂಪ್ ಪ್ರಕಾಶ್ ಅವರು ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಳೆ ನೀರಲ್ಲಿ ಮುಳುಗಿದ ಜನರ ಜೀವನ
ಹಾಸನದಲ್ಲಿ ಬಡ ಮುಸ್ಲಿಂ ಕುಟುಂಬವೊಂದು ಸಾಲಸೋಲ ಮಾಡಿ ಮನೆಯಲ್ಲಿದ್ದ ಹೆಣ್ಣುಮಗಳ ಮದುವೆಯನ್ನು ಜೂನ್ 4ಕ್ಕೆ ದಿನಾಂಕ ನಿಗದಿ ಮಾಡಿದ್ದರು. ಅಲ್ಲದೆ ಮದುವೆಗೆ ಬೇಕಾದ ಬಟ್ಟೆ ಸೇರಿ ಎಲ್ಲಾ ವಸ್ತುಗಳನ್ನು ತಂದಿದ್ದರು. ಆದರೆ ಭಾನುವಾರ ತಡರಾತ್ರಿ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸಂಪೂರ್ಣ ಜಲಾವೃತವಾಗಿದ್ದವು. ಹೀಗೆ ನೀರಿನಲ್ಲಿ ನೆನೆದಿದ್ದ ಎಲ್ಲಾ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಟ್ಟು, ಮದುವೆಗೆ ತಯಾರಿ ಮಾಡಲು ಆಗದೇ ಬೀದಿಯಲ್ಲಿ ನಿಂತು ಕಣ್ಣೀರಿಟ್ಟಿದ್ದರು.
ಮದುವೆ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ವರುಣ ಅವಕೃಪೆಯಿಂದ ಆತಂಕದ ಛಾಯೆ ಆವರಿಸಿದೆ. ಸಾಲಸೋಲ ಮಾಡಿ ತಂದಿದ್ದ ಬಟ್ಟೆ ಬರೆಗಳೆಲ್ಲವೂ ನೀರುಪಾಲಾಗಿವೆ. ಸುಣ್ಣಬಣ್ಣ ಬಳಿಯುವ ಪ್ಲಾನ್ ಮಾಡಿದ್ದ ಕುಟುಂಬ ಈಗ ಮುರಿದುಬಿದ್ದಿರುವ ಮನೆ ರೆಡಿ ಮಾಡುವುದಕ್ಕೆ ಮುಂದಾಗಬೇಕಿದೆ. ಇನ್ನು ಇದಕ್ಕೆ ಸಂಬಂಧಪಟಗಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ಕೊಡಿಸಬೇಕು ಎಂದು ಕುಟುಂಬ ಕಣ್ಣೀರಿಡುತ್ತಾ ಒತ್ತಾಯ ಮಾಡಿತ್ತು.
ಮದುವೆಗೆ ತಂದಿದ್ದ ಹೊಸ ಬಟ್ಟೆಗಳೂ ಕೂಡ ನೀರಿನಲ್ಲಿ ಹರಿದುಕೊಂಡು ಹೋಗಿವೆ. ಅಷ್ಟೇ ಅಲ್ಲದೇ ಅವರಿದ್ದ ಜಾಗದಲ್ಲಿ ವರುಣಾರ್ಭಟ ಹೆಚ್ಚಿದ್ದ ಕಾರಣ, ಮನೆಗಳ ಹೆಂಚು, ಶೀಟ್‌ಗಳು ಗಾರಿಗೆ ಹಾರಿಹೋಗಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಇಷ್ಟೆಲ್ಲ ಅವಾಂತರವಾಗಿದ್ದರೂ ಬಂದು ನೋಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬಡಾವಣೆಯ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ನಗರದ ಹೊರ ವಲಯ ದೇವೇಗೌಡ ನಗರದಲ್ಲಿ ನಿನ್ನೆ ಬಿರುಗಾಗಿ ಸಮೇತ ಭಾರಿ ಮಳೆ ಸುರಿದ ಪರಿಣಾಮ ಮನೆಯ ಮೇಲ್ಚಾವಣಿಗಳು ಹಾರಿಹೋಗಿವೆ. ಹೀಗೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಹಲವು ಕುಟುಂಬಗಳು ಬೀದಿಗೆ ಬಂದ ಘಟನೆಯೂ ನಡೆದಿದೆ. ಅಲ್ಲದೆ ಗುಡುಗು, ಗಾಳಿ ಸಹಿತದ ಭಾರೀ ಮಳೆಗೆ ಬಡಾವಣೆಯ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ಹೀಗೆ ಬಿರುಗಾಳಿಗೆ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಮನೆಗಳ ಹೆಂಚುಗಳು, ಶೀಟ್‌ಗಳು ನೂರು ಮೀಟರ್‌ಗೂ ಹೆಚ್ಚು ದೂರ ಹಾರಿ ಬಿದ್ದಿವೆ. ವಿದ್ಯುತ್ ಕಂಬಗಳು ಮನೆ ಹಾಗೂ ಬೈಕ್‌ಗಳ ಮೇಲೂ ಬಿದ್ದಿದ್ದು, ಬೈಕ್ ಸೇರಿ ಹಲವು ಮನೆಗಳು ಕುಸಿದುಬಿದ್ದಿದ್ದವು.