ಅಂಡರ್ ಪಾಸ್ ಮೇಲಿನಿಂದ ಹಾರಿದ ಕಾರು : ವ್ಯಕ್ತಿಗೆ ಗಂಭೀರ ಗಾಯ


ಕಾರಿನ ಬ್ರೇಕ್ ಪೇಟಲ್ ಗೆ ನೀರಿನ ಬಾಟಲ್ ಅಡ್ಡಿಯಾಗಿ ನೆಡೆದ ದುರ್ಘಟನೆ.
ಸಕಲೇಶಪುರ : ತಾಲ್ಲೂಕಿನ ಬಾಳ್ಳುಪೇಟೆ ಸಮೀಪ ಅಂಬೇಡ್ಕರ್ ನಗರ ಮೆಣಸಮಕ್ಕಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಬಳಿ ಅಂಡರ್ ಪಾಸ್ ಮೇಲಿಂದ ಕಾರ ಹಾರಿದ ಹಿನ್ನೆಲೆಯಲ್ಲಿ ಬಾಳ್ಳುಪೇಟೆಯ ಕಾಂತರಾಜ್ (ಜಮ್ಮನಹಳ್ಳಿ) ಯವರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಅಂಡರ್ ಪಾಸ್ ಮೇಲೆ ತೆರಳುತ್ತಿದ್ದಾಗ ತಕ್ಷಣ ಬ್ರೇಕ್ ಪೆಟಲ್ ಒತ್ತಿದಾಗ ಪೆಟಲ್ಗೆ ನೀರಿನ ಬಾಟಲು ಅಡ್ಡಿಯಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಾರು ಭಾಗಶಃ ಜಖಂಗೊಂಡಿದೆ

Post a Comment

Previous Post Next Post