ಮೈಸೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ. ಲಾಕ್ ಡೌನ್ ವಿಸ್ತರಣೆ ಮಾಡಿರುವ ಕಾರಣ ಕೆ-ಸೆಟ್ ಪರೀಕ್ಷೆಯನ್ನು ಮುಂದೂಡಿಕೆ ಮಾಡಲು ನಿರ್ಧರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ http:/kset.uni.mysore.ac.in ಗೆ ಭೇಟಿ ನೀಡಿ.ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಜೂನ್ 21 ರಂದು ಪರೀಕ್ಷೆ ನಡೆಯಲಿದೆ ಎಂದು ಸಂಯೋಜನಾಧಿಕಾರಿ ಪ್ರೊ.ಎಚ್. ರಾಜಶೇಖರ್ ಈ ಹಿಂದೆ ತಿಳಿಸಿದ್ದರು, ಈಗ ಮತ್ತೆ ಕೆ-ಸೆಟ್ ಪರೀಕ್ಷೆಯನ್ನು ಮುಂದೂಡಲಾಗಿದ್ದು ಶೀಘ್ರದಲ್ಲಿ ಈ ಬಗ್ಗೆ ಮೈಸೂರು ವಿವಿಯಿಂದ ಅಧಿಸೂಚನೆ ಹೊರಬೀಳಲಿದೆ
Tags
ರಾಜ್ಯ