ಹೆಗ್ಗದ್ದೆ ಗ್ರಾ.ಪಂ‌ ಅಧಿಕಾರ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ


ಸಕಲೇಶಪುರ: ತಾಲೂಕಿನ ಹೆಗ್ಗದ್ದೆ ಗ್ರಾ.ಪಂ ಅಧ್ಯಕ್ಷ ರಾಗಿ ಜೆಡಿಎಸ್ ಬೆಂಬಲಿತ ಸುಷ್ಮಾ ಅನಿಲ್ ಕುಮಾರ್ ಹಾಗೂ ಉಪಾಧ್ಯಕ್ಷ ರಾಗಿ ಬಿಜೆಪಿ ಬೆಂಬಲಿತ ನಿಂಗರಾಜು ಆಯ್ಕೆಯಾಗಿದ್ದಾರೆ.

   ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಷ್ಮಾ ಅನಿಲ್ ಕುಮಾರ್ 6 ಮತಗಳನ್ನು ಪಡೆದಿದ್ದು ಇವರ ಎದುರಾಳಿ ಕಾಂಗ್ರೆಸ್ ಬೆಂಬಲಿತ ಇಂದುಮತಿ ಕೇವಲ 4 ಮತಗಳನ್ನು ಪಡೆದರೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಿಂಗರಾಜು 7 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಕೆ.ಬಿ ರವಿ ಕೇವಲ 3 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ. ತಾ.ಪಂ ಇ.ಓ ಹರೀಶ್ ಚುನಾವಣಾ ಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

Post a Comment

Previous Post Next Post