ಹಾಸನದಲ್ಲಿ ಹೊಸದಾಗಿ 17 ಕೊವಿದ್ 19 ಪ್ರಕರಣಗಳು ಪತ್ತೆ

ಹಾಸನದಲ್ಲಿ ಮತ್ತೊಂದು ಕೋವಿದ್ ಸಾವುಹಾಸನ ,ಜು 7 :ಹಾಸನ ಜಿಲ್ಲೆಯಲ್ಲಿ ಮತ್ತೊಂದು ಕೊವಿದ್ ಸಾವು ಸಂಭವಿಸಿದೆ. ಇದರೊಂದಿಗೆ ಮೃತರ ಸಂಖ್ಯೆ 9 ಕ್ಕೆ ಏರಿದೆ.ಹಾಸನ ತಾಲ್ಲೂಕಿನ ಮಹಿಳೆ
ತೀವ್ರ ಉಸಿರಾಟದ ಸಮಸ್ಯೆಯಿಂದ ಜು 4 ರಂದು  ಕೊವಿದ್ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಸೋಂಕು ಶಂಕೆಯಿಂದ ಐ‌.ಸಿ.ಯು ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಚೇತರಿಕೆ ಕಾಣದ ಕಾರಣ ವೆಂಟಿಲೇಶನ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ  ನಿನ್ನೆ ಮಧ್ಯಾಹ್ನ ಕೊನೆ ಉಸಿರೆಳೆದಿದ್ದಾರೆ .
ಇವರ ಗಂಟಲು ಮತ್ತು ಮೂಗಿನ ದ್ರವ ಮಾದರಿ ಪರೀಕ್ಷೆ ವರದಿ ಪಾಸಿಟಿವ್ ಎಂದು ಬಂದಿದೆ.ಇದಲ್ಲದೆ
ಜಿಲ್ಲೆಯಲ್ಲಿ ಹೊಸದಾಗಿ 17 ಕೊವಿದ್ 19 ಪ್ರಕರಣಗಳು ಪತ್ತೆಯಾಗಿವೆ

Post a Comment

Previous Post Next Post