ಹಾಸನ ಜಿಲ್ಲೆ ಆಲೂರು ತಾಲೂಕು ಸೊಪ್ಪಿನಹಳ್ಳಿಯಲ್ಲಿ ನಡೆದ ಘಟನೆ.
ಹಾಸನ ಜಿಲ್ಲೆ ಆಲೂರು ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದ ಮಧು ಎಂಬ ಯುವಕ ಕೊಲೆಯಾಗಿದ್ದು ಇವನು ಬೈಕ್ ನಲ್ಲಿ ಸೊಪ್ಪಿನಹಳ್ಳಿ ಗ್ರಾಮದಿಂದ ಬೈರಾಪುರ ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ರೂಪೇಶ್ ಎಂಬುವವನು ಬಂದೂಕಿನಿಂದ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಹತ್ಯೆ ಮಾಡಿದ ರೂಪೇಶ್ ಆತನ ಅಣ್ಣ ರಮೇಶ್ ಎಂಬುವರ ಮಗಳನ್ನು ಮಧು ಎಂಬಾತನು ಅಪಹರಿಸಿಕೊಂಡು ಹೋಗಿದ್ದ ಎಂದು ತಿಳಿದು ಬಂದಿದ್ದು ಈ ಕುರಿತಾಗಿ ಕೊಲೆಯಾದ ಮಧು ಎಂಬುವವನ ಮೇಲೆ ಕೇಸು ದಾಖಲಾಗಿ ಜೈಲಿಗೂ ಹೋಗಿದ್ದನೆಂದು ತಿಳಿದು ಬಂದಿದೆ ಇದೆ ದ್ವೇಷದಿಂದ ರೂಪೇಶ್ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
Tags
ಆಲೂರು