ಶ್ರೀಗಂಧ ಮರ ಕಟಾವು ಮಾಡಲು ಯತ್ನಿಸಿದ ಕಳ್ಳರು.

ಶ್ರೀಗಂಧ ಮರವನ್ನು ಕಡಿದು ಸಾಗಿಸಲು ಕಳ್ಳರು ಯತ್ನಿಸಿದ್ದಾರೆ. ಆದರೆ ಮನೆಯವರು ಮತ್ತು ಸ್ಥಳೀಯರು ಕೂಗಿ ಬೆದರಿಸಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ಸಾಗರದ ವಿಜಯನಗರ ಬಡಾವಣೆಯ ಸಮೀಪ ಜಂಬಗಾರು ಹಿರಿಯಣ್ಣಯ್ಯ ಅವರ ಭೂಮಿಯಲ್ಲಿ ಶ್ರೀಗಂಧದ
ಮರವಿದೆ. ಇದನ್ನು ಕಟಾವು ಮಾಡಿ ಕದ್ದೊಯ್ಯಲು ಕಳ್ಳರು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಕಳ್ಳರ ಕೃತ್ಯ ಗಮನಿಸಿದ ಸ್ಥಳೀಯರು ಜೋರಾಗಿ ಕೂಗಿದ್ದಾರೆ. ಅಲ್ಲದೆ ಕಳ್ಳರನ್ನು ಬೆದರಿಸಿದ್ದಾರೆ. ಹಾಗಾಗಿ ಕೃತ್ಯವನ್ನು ಅರ್ಧಕ್ಕೆ ನಿಲ್ಲಿಸಿ ಕಳ್ಳರು ಪರಾರಿಯಾಗಿದ್ದಾರೆ. 

Post a Comment

Previous Post Next Post