ಇನ್ಮುಂದೆ ನಾವು ಇಬ್ಬರಲ್ಲ ಮೂವರು: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಿರೂಷ್ಕಾ ದಂಪತಿ

ಸ್ಟಾರ್​ ದಂಪತಿಯಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಚಾರವನ್ನು ಅನುಷ್ಕಾ ಅವರು ಟ್ವಿಟರ್​ ಮೂಲಕ ಗುರುವಾರ ಹಂಚಿಕೊಂಡಿದ್ದಾರೆ.


ಮೊದಲ ಬಾರಿ ಬೇಬಿ ಬಂಪ್​ ಫೋಟೋವನ್ನು ಅನುಷ್ಕಾ ಅವರು ಶೇರ್​ ಮಾಡಿಕೊಂಡಿದ್ದು, ಫೋಟೋದಲ್ಲಿ ವಿರಾಟ್​ ಸಹ ತಂದೆಯಾಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ನಾವು ಇಬ್ಬರಲ್ಲ, ಮೂವರು. 2021 ಜನವರಿಗೆ ಬರುತ್ತಿದ್ದೇವೆ ಎಂದು ಅನುಷ್ಕಾ ಪೋಟೋ ಜತೆಗೆ ಶೇರ್​ ಮಾಡಿಕೊಂಡಿದ್ದಾರೆ

Post a Comment

Previous Post Next Post