ಅಂಗಮಾರಿ ರೋಗ ಹತೋಟಿಗೆ ಮುಂಜಾಗ್ರತ ಕ್ರಮಗಳು


 ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿ ಈಗಾಗಲೇ 55 ರಿಂದ 60 ದಿವಸಗಳು ಕಳೆದಿದ್ದು, ಬೆಳೆಯು ಈಗ ಹೂವಿನ ಹಂತದಲ್ಲಿರುತ್ತದೆ. ಆಲೂಗಡ್ಡೆ ಬೆಳೆಯಲ್ಲಿ ಈಗ ಗಡ್ಡೆ ಅಭಿವೃದ್ದಿ ಹಂತದಲ್ಲಿರುವುದರಿಂದ ಇದು ಬೆಳೆಯ ಪ್ರಮುಖ ಹಂತವಾಗಿರುತ್ತದೆ. ಈ ಸಂದರ್ಭದಲ್ಲಿ ಆಲೂಗಡ್ಡೆ ಬೆಳೆಯಲ್ಲಿ ರೋಗಗಳು ಹಾಗೂ ಕೀಟಗಳನ್ನು ನಿಯಂತ್ರಿಸುವುದು ಬಹಳ ಅತ್ಯಗತ್ಯವಾಗಿರುತ್ತದೆ. ಮೋಡ ಕವಿದ ವಾತಾವರಣ/ತುಂತುರು ಮಳೆಯಿಂದಾಗಿ ಆಲೂಗಡ್ಡೆ ಬೆಳೆಗೆ ಈ ಹಂತದಲ್ಲಿ ಅಂಗಮಾರಿ ರೋಗ ಮತ್ತು ರಸಹೀರುವ ಕೀಟಗಳು (ಥ್ರೀಪ್ಸ್/ಎಫಿಡ್ಸ್) ಕಂಡುಬರುವ ಸಾಧ್ಯತೆ ಇರುತ್ತದೆ. 
ಅಂಗಮಾರಿ ರೋಗ:- ಈ ರೋಗವು ಆಲೂಗಡ್ಡೆ ಬೆಳೆಯಲ್ಲಿ ಅತೀನಷ್ಟ ಉಂಟುಮಾಡುವ ಮಾರಕ  ರೋಗವಾಗಿರುತ್ತದೆ. ಈ ರೋಗವು ಕಂಡುಬಂದರೆ ಆಲೂಗಡ್ಡೆ ಬೆಳೆಯು ಸಂಪೂರ್ಣವಾಗಿ ನಾಶವಾಗುವ  ಸಾಧ್ಯತೆಯಿರುತ್ತದೆ. 
ಅಂಗಮಾರಿ ರೋಗದ ಲಕ್ಷಣಗಳು:- ಮೊದಲಿಗೆ ನೀರಿನಿಂದ ಆವೃತವಾದ ದುಂಡನೆಯ ಮಚ್ಚೆಗಳು ಎಲೆಯ ಅಂಚಿನಲ್ಲಿ ಕಾಣಬಹುದು. ಈ ಮಚ್ಚೆಗಳು ಕಂದು ಬಣ್ಣದಿಂದ ನಂತರ ಕಪ್ಪಾಗಿ ಪರಿವರ್ತನೆಯಾಗುತ್ತವೆ. ಎಲೆಯ ಕೆಳಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದಿಂದ ಕೂಡಿದ್ದು  ರೋಗವು ಗಡ್ಡೆಗೆ ಹರಡುತ್ತದೆ. ರೋಗಕ್ಕೆ ತುತ್ತಾದ ಗಡ್ಡೆಯು ಕೊಳೆಯುತ್ತದೆ. ರೋಗ ಉಲ್ಬಣಗೊಂಡಾಗ ಗಿಡ ಪೂರ್ತಿ ಒಣಗಿ ಸಾಯುತ್ತದೆ. 
ರಸಹೀರುವ ಕೀಟಗಳ ಹಾನಿಯ ಲಕ್ಷಣಗಳು:- ಹೇನು ಮತ್ತು ಬಿಳಿನೋಣ (ಥ್ರೀಪ್ಸ್/ಎಫಿಡ್ಸ್) ರಸಹೀರುವ ಕೀಟಗಳು ಎಲೆಯ ಕೆಳಭಾಗದಿಂದ ರಸವನ್ನು ಹೀರುವುದರಿಂದ ಎಲೆಗಳು ಕೆಳಮುಖವಾಗಿ ಮುರುಟಾಗಿ ಕಪ್ಪು ಬೂಷ್ಟ ಬೆಳವಣಿಗೆಯಾಗುತ್ತದೆ. ಸದರಿ ಕೀಟಗಳು ನಂಜು ವೈರಸ್ ರೋಗವನ್ನು ಹರಡುವ ಸಾಧ್ಯತೆ  ಹೆಚ್ಚಾಗಿರುತ್ತದೆ.
ಅಂಗಮಾರಿ ರೋಗ/ಕೀಟಗಳ ಹತೋಟಿ ಕ್ರಮಗಳು:- ಪ್ರಸ್ತುತ ಆಲೂಗಡ್ಡೆ ಬೆಳೆಯಲ್ಲಿ ಅಂಗಾಮಾರಿ ರೋಗದ ಲಕ್ಷಣಗಳು ಕಂಡು ಬರದಿದ್ದರೆ ಮುಂಜಾಗ್ರತ ಕ್ರಮವಾಗಿ ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟಗಳ ಬಾದೆ ಇದ್ದಲ್ಲಿ ಶಿಲೀಂದ್ರನಾಶಕದ (ಮ್ಯಾಂಕೋಜೆಬ್) ಜೊತೆಗೆ ಇಮಿಡಾಕ್ಲೋಫ್ರಿಡ್ 0.5 ಎಂ.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
ಈಗಾಗಲೇ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗದ ಲಕ್ಷಣಗಳು ಕಂಡು ಬಂದಿದ್ದಲ್ಲಿ ಸೈಮೋಕ್ಸಾನಿಲ್ + ಮ್ಯಾಂಕೋಜೆಬ್ (ಮ್ಯಾಕ್ಸಿಮೇಟ್/ಕರ್ಜೆಟ್) 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಅಥವಾ ಡೈಮೀಥೋಮಾರ್ಫ್ (ಅಕ್ರೋಬ್ಯಾಟ್/ಲ್ಯೂರಿಟ್) 1 ಗ್ರಾಂ + ಮ್ಯಾಂಕೋಜೆಬ್ 2.50 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಫಿನಮಿಡೋನ್ + ಮ್ಯಾಂಕೋಜೆಬ್ (ಸೆಕ್ಟಿನ್) 3 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. ಕೀಟಗಳ ಬಾದೆ ಇದ್ದಲ್ಲಿ ಈ ಮೇಲಿನ ಶಿಲೀಂದ್ರನಾಶಕದ ಜೊತೆಗೆ ಇಮಿಡಾಕ್ಲೋಫ್ರಿಡ್ 0.5 ಎಂ.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
ಹೆಚ್ಚಿನ ಮಾಹಿತಿಗೆ ಹಾಗೂ ತಾಂತ್ರಿಕ ವಿವರಗಳಿಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ)ಹಾಸನ/ ತಾಲ್ಲೂಕು ಮಟ್ಟದ ಅಧಿಕಾರಿಗಳು/ ಹೋಬಳಿ ಮಟ್ಟದ ಅಧಿಕಾರಿಗಳು ಮತ್ತು ಆಲೂಗಡ್ಡೆ ಸಂಶೋಧನ ಕೇಂದ್ರ ಸೋಮನಹಳ್ಳಿ ಕಾವಲು 

Post a Comment

Previous Post Next Post