ಪಶ್ಚಿಮ ಬಂಗಾಳದಲ್ಲಿ ಗುಂಡಾಗಳ ಹಿಂಸಚಾರ ಅವರ ಮೇಲೆ ಕ್ರಮಕೈಗೊಳ್ಳುವಂತೆ ಮನವಿ

ಹಾಸನ: ವಿಧಾನಸಭಾ ಚುನಾವಣೆಗಳ ಪಲಿತಾಂಶಗಳ ಘೋಷಣೆ ನಂತರ ಪಶ್ಚಿಮ ಬಂಗಾಳದಲ್ಲಿ ಗುಂಡಾಗಳು ಹಿಂಸಚಾರ ನಡೆಸುತ್ತಿದ್ದು, ಕೂಡಲೇ ಅವರ ಮೇಲೆ ಕ್ರಮಕೈಗೊಳ್ಳುವಂತೆ ಬಿಜೆಪಿ ಹಾಸನ ನಗರ ಮಂಡಲದಿAದ ಅಪರ ಜಿಲ್ಲಾಧಿಕಾರಿ ಕವಿತರಾಜರಾಂ ರವರಿಗೆ ಮನವಿ ಸಲ್ಲಿಸಲಾಯಿತು.


       ಮೇ ೨ರ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಘೋಷಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಹಿಂಸಾಚಾರ ನಡೆಯುತ್ತಿದ್ದು, ಇಲ್ಲಿನ ನಿಯೋಜಿತ ಮುಖ್ಯಮಂತ್ರಿ ಮಮತ ಬ್ಯಾನರ್ಜಿಯ ಟಿ.ಎಂ.ಸಿ ಪಕ್ಷದ ಗೂಂಡಾಗಳು ನಡೆಸುತ್ತಿರುವ ಹಿಂಸಾಚಾರವನ್ನು ಭಾರತೀಯ ಜನತಾಪಾರ್ಟಿ ತೀರ್ವವಾಗಿ ಖಂಡಿಸುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಕನಿಷ್ಟ ೯ ಜನ ಬಿಜೆಪಿ ಕಾರ್ಯಕರ್ತರ ಹತ್ಯೆ ಆಗಿದ್ದು, ನೂರಾರು ಕಾರ್ಯಕರ್ತರು ತೀರ್ವವಾಗಿ ಗಾಯಗೊಂಡಿದ್ಯಾರೆ. ಕೆಲವು ಕಡೆ ಮಹಿಳಾ ಕಾರ್ಯಕರ್ತರ ಮಾನಭಂಗ ಮಾಡುವ ಪ್ರಯತ್ನಗಳೂ ನಡೆದಿವೆ. ಪಶ್ಚಿಮಬಂಗಾಳ ರಾಜ್ಯದಲ್ಲೆಡೆ ಭಯಭೀತ ವಾತವರಣವನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ದೂರಿದರು. ಕಳೆದ ೫ ವರ್ಷಗಳಲ್ಲಿ ೧೪೦ ಕ್ಕೂ ಅಧಿಕ ಜನ ಬಿಜೆಪಿ ಕಾರ್ಯಕರ್ತರು ತೃಣಮುಲ ಕಾಂಗ್ರೆಸ್ ನ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ಫಲಿತಾಂಶ ಬಂದು ಇನ್ನೂ ೨ ದಿನಗಳೂ ಕಳೆದಿಲ್ಲ . ಅಗಲೇ ಹತ್ತಾರು ಕಡೆಗಳಲ್ಲಿ ದೌರ್ಜನ್ಯ ಆಕ್ರಮಣ, ಮನೆಗೆ ನುಗ್ಗಿ ದಾಳಿ ಮಾಡುವ ಘಟನೆಗಳು ನಡೆದಿದೆ. ಬಿಜೆಪಿ ಕಾರ್ಯತ್ರರ ಜೊತೆಗೆ ಬಿಜೆಪಿ ಮತದಾರರ ಮನೆಗಳ ಮೇಲೂ ದಾಳಿ ಮಾಡಿ ಹಿಂಸಾಚಾರ ನೆಡೆಸುತ್ತಿದ್ದಾರೆ ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದರು.

     ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಪಶ್ಚಿಮಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಕ್ಷರಶಃ ಗೂಂಡಾರಾಜ್ಯವಾಗಿ ಮಾರ್ಪಟ್ಟಿದೆ. ಆದ್ದರಿಂದ ಗೌರವಾನ್ವಿತ ರಾಷ್ಟçಪತಿಗಳೂ ಈ ಕೂಡಲೇ ಮಮತಾ ಬ್ಯಾನರ್ಜಿ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ಆ ಪಶ್ಚಿಮಬಂಗಾಳ ರಾಜ್ಯದಲ್ಲಿ ರಾಷ್ಟçಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸುತ್ತೇವೆ ಎಂದರು. ರಾಜ್ಯದಲ್ಲಿ ಮತ್ತೆ ಶಾಂತಿ ಸುವ್ಯವಸ್ತೆ ಮರುಸ್ಥಾಪಿಸಿ, ಕಾನೂನು ಸುವ್ಯವಸ್ತೆಯನ್ನು ಬಿಗಿಗೊಳಿಸಿ, ಮುಗ್ಧ ಅಮಾಯಕ ಜನಗಳ ರಕ್ಷಣೆ ಮಾಡಬೇಕು. ಈ ಗಲಭೆಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ದೊರಕಿಸಬೇಕು. ಈ ಕೃತ್ಯದಲ್ಲಿ ತೊಡಗಿರುವ ಟಿ.ಎಮ್.ಸಿ ಗೂಂಡಾಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

      ಇದೆ ವೇಳೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ವೇಣುಗೋಪಾಲ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post