ಸಕಲೇಶಪುರ ಪಟ್ಟಣದಲ್ಲಿ ಆಫ್ ಡೇ ಲಾಕ್ ಡೌನ್ ಗೆ‌ ನಿರ್ಧಾರ

ಹಾಸನ; ಸಕಲೇಶಪುರದಲ್ಲಿ ಕೊರೋನಾ ಹಾವಳಿ ತಡೆಗಟ್ಟಲು ವಾರದ ೬ ದಿನ ಮುಂಜಾನೆ ೭ ರಿಂದ ಮಧ್ಯಾಹ್ನ ೩ ಗಂಟೆಯ ವರೆಗೆ ವ್ಯಾಪಾರ ವಹಿವಾಟಿಗೆ ಶಾಸಕ ಎಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
 ಇಂದು ನಡೆದ ಸಭೆಯಲ್ಲಿ, ಜನಪ್ರತಿನಿಧಿಗಳು ,ವರ್ತಕರು..ಸ್ವಯಂಪ್ರೇರಿತವಾಗಿ ಪಟ್ಟಣದಲ್ಲಿ  ಹಾಫ್ ಲಾಕ್ ಡೌನ್ ಮಾಡಲು ಒಪ್ಪಿಗೆ ಸುಚಿಸಿದರು.

ವಾರದ ಆರು ದಿನ ಮುಂಜಾನೆ 7ರಿಂದ ಮಧ್ಯಾಹ್ನ 3ಗಂಟೆವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದು.

ಮಧ್ಯಾಹ್ನ 3ಗಂಟೆ ನಂತರ 
 ವೈದ್ಯಕೀಯ ಸೇವೆಗಳಿಗೆ  ಮಾತ್ರ ಅವಕಾಶವಿರುತ್ತದೆ.
ಇತರ ಎಲ್ಲಾ ಸೇವೆಗಳು ಹಾಗೂ ಅಂಗಡಿಗಳನ್ನು ಮುಚ್ಚಲು ಸಭೆಯ ಒಪ್ಪಿಗೆ‌‌ ಸೂಚಿಸಲಾಗಿದೆ.

ಕೊರೊನಾ ಮಹಾಮಾರಿ ತಡೆಗಟ್ಟಲು ತಾಲೂಕಿನ‌ ಜನರಿಂದ ಉತ್ತಮ ಸಹಕಾರ ನೀಡಬೇಕಾಗಿ ಶಾಸಕರು ಮನವಿ ಮಾಡಿದ್ದಾರೆ.

Post a Comment

Previous Post Next Post