ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವಶಂಕರಪ್ಪನವರಿಗೆ ಮಾದಿಗ ದಂಡೋರದಿಂದ ಆತ್ಮೀಯ ಸನ್ಮಾನ

ಹಾಸನ: ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಶಂಕರಪ್ಪರವರು ಆಯ್ಕೆಗೊಂಡಿರುವ ಹಿನ್ನಲೆಯಲ್ಲಿ ಹಾಸನ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ಮಾದಿಗ ದಂಡೋರದಿಂದ ಆತ್ಮೀಯವಾಗಿ ಮೈಸೂರುಪೇಟ ತೊಡಿಸಿ, ಶಾಲು ಹೊದಿಸಿ ಹಾಗೂ ಹಾರ ಹಾಕುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
    ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಂಕರಪ್ಪರ ಕುರಿತು ಮಾತನಾಡಿದ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಾಗೂ ಡಾ|| ಬಾಬುಜಗಜೀವನ್ ರಾಮ್ ಮಾದಿಗ ಮಹಾಸಭಾ ವೇದಿಕೆಯ ಅಧ್ಯಕ್ಷ ಹೆಚ್.ಪಿ. ಶಂಕರರಾಜು ರವರು ಉದ್ದೇಶಿಸಿ ಮಾತನಾಡಿದ ಅವರು, ಎ.ಜೆ. ಸದಾಶಿವ ಆಯೋಗ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟು ಶೋಷಿತ ಜನಾಂಗಕ್ಕೆ ಸೇರಿದ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು. ಕರ್ನಾಟಕದಲ್ಲಿ ಮಾದಿಗ ಸಮುದಾಯದ ರಸ್ತೆ ಬದಿಯಲ್ಲಿ ಚಪ್ಪಲಿ ಕೆಲಸ, ನಗರಸಭೆ, ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ, ಹಳ್ಳಿಗಳಲ್ಲಿ ಹಳ್ಳಿಗಾಡಿನ ಜನಾಂಗ ಜಮೀನು ಇಲ್ಲದೆ ಕೂಲಿಗಾಗಿ ನಗರ ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ವರದಿ ತಯಾರು ಮಾಡಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಶೋಷಿತ ಜನಾಂಗಕ್ಕೆ ಸೇರಿದ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಗಮನಸೆಳೆಯಬೇಕಾಗಿದೆ ಎಂದರು. ಇದನ್ನು ಮಾದಿಗ ಸಮುದಾಯದ ಒಂದು ಆಶಾಕಿರಣ ಎಂದು ಭಾವಿಸುತ್ತದೆ. ಒಳಮೀಸಲಾತಿ ವಿಚಾರದಲ್ಲಿ ಸ್ಪರ್ದೆ ಬೇಡ. ಕೂಡಲೇ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ತರಲು ಬಿಜೆಪಿ ಪಕ್ಷಕ್ಕೆ ಒತ್ತಡ ತರುವಂತೆ ನೂತನ ರಾಜ್ಯ ಉಪಾಧ್ಯಕ್ಷರಾಗಿರುವ ಶಂಕರಪ್ಪನವರಿಗೆ ಮನವಿ ಮಾಡಲಾಯಿತು. ನೂತನ ಉಪಾಧ್ಯಕ್ಷರು ಸಮುದಾಯದ ಪರವಾಗಿ ಕೆಲಸ ಮಾಡುವುದಾಗಿ ಇದೆ ವೇಳೆ ಉತ್ತೇಜಿಸಿದರು.
      ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಶಂಕರಪ್ಪರವರು ಮಾತನಾಡಿ, ಹಾಸನ ಜಿಲ್ಲೆಯಲ್ಲಿಯೊಂದರಲ್ಲೆ 2 ಲಕ್ಷ ಜನ ಮಾದಿಗ ಸಮುದಾಯಕ್ಕೆ ಸೇರಿದವರು ಇದ್ದಾರೆ. ಮಾದಿಗರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯವನ್ನು ಸರಕಾರ ನೀಡಲೇಬೇಕು ಎಂದರು. ನಮ್ಮ ಸಮುದಾಯದವರ ಮುಖ್ಯ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಯಾಗಿದೆ ಎಂದು ಇದೆ ವೇಳೆ ಮನವಿಯ ಬಗ್ಗೆ ಭರವಸೆಯ ಮಾತನು ಹೇಳಿದರು.
     ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ಸಮುದಾಯದವರು ನೂತನ ರಾಜ್ಯ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
     ಈಸಂದರ್ಭದಲ್ಲಿ ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಮಹೇಶ್, ಎಸ್.ಸಿ. ಮೋರ್ಚಾ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ, ಹುಚ್ಚಯ್ಯ, ಜಿಲ್ಲಾ ಉಪಾಧ್ಯಕ್ಷ ಕಿರುಗಡಲು ವೆಂಕಟಯ್ಯ, ರಾಜ್ಯ ಕಾರ್ಯದರ್ಶಿ ಗಂಜಿಗೆರೆ ರಾಜು, ಜಿಲ್ಲಾ ಕಾರ್ಯದರ್ಶಿ ಸುರೇಶ್, 

Post a Comment

Previous Post Next Post