ಸತ್ಯಮಂಗಲ ಕೆರೆಗೆ ಬಾಗಿನ ಅರ್ಪಣೆ

ಹಾಸನ:  ಹಲವಾರು ದಿವಸಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಸತ್ಯಮಂಗಲ ಕೆರೆ ತುಂಬಿದ ಹಿನ್ನಲೆಯಲ್ಲಿ ತಾಲೂಕಿನ ಸತ್ಯಮಂಗಲ ಕೆರೆಗೆ ಅಭಿವೃದ್ಧಿ ಸಮಿತಿಯಿಂದ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಮೊದಲು ಕೆರೆಗೆ ಪೂಜೆ ಸಲ್ಲಿಸಿ ನಂತರ ಕೆರೆಗೆ ಬಾಗಿನ ಅರ್ಪಿಸಲಾಯಿತು. ಕೊನೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಇದೆ ವೇಳೆ ಗ್ರಾಪಂನ ಪ್ರೇಮಮ್ಮ, ಪಾಪೇಗೌಡ, ಚಂದ್ರೇಗೌಡ, ದೇವಪ್ಪ, ಕಾಮಾಕ್ಷಿ, ಡಾ. ಸುಜಾತ, ವೀಣಾ, ಪ್ರಕಾಶ್ ಇತರರು ಪಾಲ್ಗೊಂಡಿದ್ದರು. 

Post a Comment

Previous Post Next Post