ಬ್ರೇಕಿಂಗ್ ನ್ಯೂಸ್- ರಾಜಾಹುಲಿಯ ನಟ ಪೋಲಿಸರ ವಶಕ್ಕೆ

ರಾಜಾಹುಲಿಯಲ್ಲಿ ಸಹನಟನಾಗಿ ನಟಿಸಿದ್ದ ನಟ ಹರ್ಷನನ್ನು ಪೊಲೀಸರು ರಾತ್ರಿ ವಶಕ್ಕೆ ಪಡೆದಿದ್ದಾರೆ. ರಾತ್ರಿ ಜಾಲ ಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ಹೊರಗೆ ಕೂತು ಸ್ನೇಹಿತರ ಜೊತೆ ಎಣ್ಣೆ ಹೊಡೆಯುತ್ತಿದ್ದರು. ಆಗ ಅಲ್ಲಿಗೆ ಬಂದ ಬೀಟ್ ಪೊಲೀಸರು ಯಾಕೆ ಕುಡಿದು ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.ಅದಕ್ಕೆ ಹರ್ಷ ನಾನು ನಟ.ನನಗೆ ದೊಡ್ಡ ದೊಡ್ಡವರೆಲ್ಲ ಪರಿಚಯ ಇದ್ದಾರೆ ಎಂದು ಪೊಲಿಸರಿಗೆ ಅವಾಜ್ ಹಾಕಿದ್ದಾನೆ.“ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ, ನಮಗೆ ದೊಡ್ಡ ವ್ಯಕ್ತಿಗಳ ಪರಿಚಯವಿದೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಅವಾಜ್‌ ಹಾಕಿದ್ದಾರೆ. ಕಿರಿಕ್‌ ಮಾಡಿದ ಕೂಡಲೇ ಪೊಲೀಸರು ಸ್ನೇಹಿತರ ಜೊತೆ ಹರ್ಷರನ್ನು ವಶಕ್ಕೆ ಪಡೆದು ಕಾರಿನಲ್ಲಿ ಕುಳ್ಳಿರಿಸಿ ಠಾಣೆಗೆ ಕರೆ ತಂದು ಬಿಸಿ ಮುಟ್ಟಿಸಿದ್ದಾರೆ.ರಾಜಾಹುಲಿ, ವರ್ಧನ ಸೇರಿದಂತೆ ಹಲವು ಚಿತ್ರಗಳಲ್ಲಿ ಹರ್ಷ ನಟಿಸಿದ್ದಾರೆ.ಈಗ ಮಾಹಿತಿ ಬಂದಂತೆ ಅವರಿಗೆ ವಾರ್ನ್ ಮಾಡಿ ಹೊರ ಬಿಟ್ಟಿದ್ದಾರೆ ಎನ್ನಲಾಗಿದೆ

Post a Comment

Previous Post Next Post