ಗಾಂಧಿನಗರದಲ್ಲಿ "ರಮ್ಯ For ಲವ್" ಹಾಸನ ಹುಡುಗನ ಕನಸಿನ ಪಯಣ

ಇದೀಗ ಗಾಂಧಿನಗರದಲ್ಲಿ ಅದೆಷ್ಟೋ ನಿರ್ದೇಶಕರು ತಮ್ಮ ಕನಸನ್ನು ನೆನಸು ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ .ಅದರಲ್ಲಿ ಒಬ್ಬರಾದ ಯುವ ನಿರ್ದೇಶಕ ನಮ್ಮ‌ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮನು ಗೌಡ ಮಾಲ್ಮನೆ ರವರ ಸಾರಥ್ಯದಲ್ಲಿ ಭರತ್ ಹಾಗೂ ಐಶ್ವರ್ಯ ರವರು ನಟಿಸಿಲಿರುವ " ರಮ್ಯ For ಲವ್ " ಎಂಬ ಶೀರ್ಷಿಕೆಯು ನಿಕ್ಷೀತ್ ಕ್ರೀಯೆಷನ್ಸ್ ನಲ್ಲಿ ಕ್ರೇಜಿ ಸಂತೋಷ ಹಾಗೂ ರೇಣುಕ ಚನ್ನಪಟ್ಟಣ ರವರ‌ ನಿರ್ಮಾಣದಲ್ಲಿ ಮೂಡಿಬರಲಿದೆ ಈ ಹೊಸಬರ ಚಿತ್ರ ತಂಡವು ಗಾಂಧಿನಗರದಲ್ಲಿ ತಮ್ಮದೇ ಆದ ಚಾಪ‌ ಮೂಡಿಸಲು ‌ವಿಭಿನ್ನ‌ ಶೈಲಿಯ ಚಿತ್ರವನ್ನು ನೀಡುವ ಮಾತನ್ನು ನಿರ್ದೇಶಕರಾದ ಮನು ಗೌಡ ಮಾಲ್ಮನೆ ರವರು ನೀಡಿದ್ದಾರೆ ಹಾಗೆಯೇ ನಿರ್ದೇಶಕರು ತಮ್ಮದೇ ‌ಆದ ತಂಡವನ್ನು ರಚಿಸಿ ಕೊಂಡಿದ್ದಾರೆ ಇವರ ತಂಡದಲ್ಲಿ  ಪ್ರವೀಣ್ ‌ರಾಜ್ ಸಿಂಹ , ಮಹೇಶ್ ‌, ಶ್ರೀನಿವಾಸ , ಶ್ರೇಯಸ್ ಇದ್ದಾರೆ ಹಾಗೂ ಈ ಚಿತ್ರಕ್ಕೆ ಕ್ಲಾಸ್ - ಮಾಸ್ ಡೈಲಾಗ್ ರೈಟರ್ ಎಂದೆ ಹೆಸರಾದ ಮಲವಳ್ಳಿ ಸಾಯಿ ಕೃಷ್ಣ ರವರು ಸಂಭಾಷಣೆ ರಚಿಸಿದ್ದಾರೆ ಮತ್ತು ಸಂಗೀತ ನಿರ್ದೇಶಕರಾದ ಕಾರ್ತಿಕ್ ವೆಂಕಟೇಶ್ ಅವರು ನೀಡಿದ್ದಾರೆ. ಹಾಗೆಯೇ ಈ ಚಿತ್ರದ ಸಾಹಸವನ್ನು ಅಲ್ಟಿಮೇಟ್ ಶಿವು ಅವರು ಮಾಡಲಿದ್ದಾರೆ .

ಹಾಗೆಯೇ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಕೆಲವು ಹೆಸರಾಂತ ಕಾಲವಿದರು ಅಭಿನಯಿಸುತ್ತಿದ್ದು ಚಿತ್ರಕ್ಕೆ ಇವರುಗಳು ಬೆನ್ನೆಲುಬಾಗಿ ನಿಂತಿದ್ದಾರೆ 

ಸದ್ಯ ಈ ಸಿನಿಮಾವು ಈ ವರ್ಷದ ಅಂತ್ಯದಲ್ಲಿ ತೆರೆ ಕಾಣಲಿದ್ದೆ ಎಂದು ನಿರ್ದೇಶಕರಾದ ಮನು ಗೌಡ ಮಾಲ್ಮನೆ ರವರು ತಿಳಿಸಿದ್ದಾರೆ.

Post a Comment

Previous Post Next Post