ಯಡಿಯೂರಪ್ಪವರನ್ನೆ ಮುಂದುವರೆಸಲು ಆಗ್ರಹಿಸಿ ವೀರಶೈವ ಲಿಂಗಾಯತ ಯುವ ಸೇನೆಯಿಂದ ಪ್ರತಿಭಟನೆ

ಹಾಸನ: ಬಿ.ಎಸ್. ಯಡಿಯೂರಪ್ಪವರನ್ನೇ ಉಳಿದ ೨ ವರ್ಷಗಳ ಕಾಲ ಮುಂದುವರೆಸಲು ಆಗ್ರಹಿಸಿ ವೀರಶೈವ ಲಿಂಗಾಯತ ಯುವಸೇನೆಯಿಂದ ಹೇಮಾವತಿ ಪ್ರತಿಮೆ ಎದುರು ಪ್ರತಿಭಟಿಸಿದರು.

 
 ರಾಜ್ಯ ಕಂಡ ವೀರಶೈವ ಲಿಂಗಾಯತ ಸಮಾಜದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಯಡಿಯೂರಪ್ಪನವರನ್ನು ಇಳಿಸಲು ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಹಾಸನ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಕಂಡ ರೈತ ನಾಯಕರು, ಧೀಮಂತರಾದ ಬಡವರ ಬಂಧು ಸರ್ವ ಜನಾಂಗದ ನಾಯಕರು ಹಾಗೂ ರಾಜ್ಯದಲ್ಲಿ ಬೇರು ಮಟ್ಟದಿಂದ ಬಿಜೆಪಿ ಕಟ್ಟಿ ಬೆಳೆಸಿ ದಕ್ಷಿಣ ಭಾರತದ ಏಕೈಕ ರಾಜ್ಯ ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದAತಹ ನೇರ ನಿಷ್ಟೂರ ಹಾಗೂ ಕೊಟ್ಟ ಮಾತು ಉಳಿಸಿಕೊಳ್ಳುವ ಏಕೈಕ ನಾಯಕರಾದ ಯಡಿಯೂರಪ್ಪ ಅವರು ಆಗಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ನಡೆಸುತ್ತಿರುವ ಷಡ್ಯಂತ್ರವನ್ನು ನಿಲ್ಲಿಸಿ, ಅವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು ಮತ್ತು ಈ ವಯಸ್ಸಿನಲ್ಲೂ ಚಿರ ಯುವಕರನ್ನು ನಾಚಿಸುವಂತೆ ದಿನದಲ್ಲಿ ೧೮ ಗಂಟೆಗಳ ಕಾಲ ಮುಖ್ಯಮಂತ್ರಿಯು ಸೇವೆಯನ್ನು ಸಲ್ಲಿಸುತ್ತಿರುವ ಏಕೈಕ ನಾಯಕ ಎಂದರೆ ತಪ್ಪಾಗಲಾರದು ಎಂದರು. ಈ ಕೋವಿಡ್ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯಾಗಿರುತ್ತಾರೆ. ಮುಂದೆ ೨೦೨೩ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಇವರ ಅವಶ್ಯಕತೆ ಇರುವುದರಿಂದ ಬಿಜೆಪಿ ರಾಷ್ಟç ನಾಯಕರನ್ನು ಹಾಗೂ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಯಡಿಯೂರಪ್ಪನವರನ್ನ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕೆAದು ಒತ್ತಾಯಿಸಿದರು.

     ಪ್ರತಿಭಟನೆಯಲ್ಲಿ ವೀರಶೈವ ಲಿಂಗಾಯತ ಯುವಸೇನೆಯ ಜಿಲ್ಲಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಅವಿನಾಶ್, ಎಸ್. ಮೋಹನ್ ಕುಮಾರ್, ಕಾರ್ಯದರ್ಶಿ ವೀರೇಶ್, ರಾಜು, ದಿಲೀಪ್, ದರ್ಶನ್, ಸಮಾಜದ ಮುಖಂಡರಾದ ಷಡಕ್ಷರಿ, ವಸಂತ ಕುಮಾರ್, ಹೇಮೇಶ್, ಹೇಮಂತ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post