ರಿತನ್ಯಾ, ಹೆಸರಿನ ತರನೇ ಸಖತ್ ಕ್ಯೂಟ್& ಗ್ಲಾಮರಸ್ ಬ್ಯೂಟಿ. ರಿಯಾಲಿಟಿ ಶೋ, ಮಾಡೆಲಿಂಗ್ ಲೋಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಈ ಚಿಟ್ಟಿ, ಈಗ ಸ್ಯಾಂಡಲ್ವುಡ್ಗೆ ಎಂಟ್ರಿಕೊಡ್ತಿದ್ದಾರೆ. ಪಕ್ಕ ದೇಸಿ ಪ್ರತಿಭೆ ಆಗಿರುವ ರಿತನ್ಯ ಗೌಡ, ಹಾಸನದ ಸಕಲೇಶಪುರ ಮೂಲದ ಹುಡುಗಿ. ಬಣ್ಣದ ಜಗತ್ತಿನ ಮೇಲೆ ಕಲರ್ಫುಲ್ ಕನಸು ಕಂಡಿದ್ದ ಈ ಚೆಲುವೆ, ಸಿಲಿಕಾನ್ ಸಿಟಿಗೆ ಬಂದು ಮೊದಲು ಮಾಡಲಿಂಗ್ ಲೋಕಕ್ಕೆ ಹೋಗಿ, ಮಿಸ್ ಸ್ಟೈಲ್ ಕ್ವೀನ್ ಅಂತ ಖ್ಯಾತಿ ಗಳಿಸಿ ತನ್ನ ಡಿಫ್ರೆಂಟ್ ಮ್ಯಾನರಿಸಂ ಲುಕ್ನಿಂದ ಕಿರೀಟ ಗೆದ್ದ ಬೆಡಗಿ..
ಈಗ ಮಾರ್ದನಿ ಅನ್ನೋ ಹೊಸ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಸಖತ್ ಮಾಸ್ & ಕ್ಲಾಸ್ ಲುಕ್ನಲ್ಲಿ ರಿತನ್ಯಾ ಬರ್ತಿದ್ದಾರೆ. ಹೊಸಬರಿಂದಲ್ಲೇ ಕೂಡಿರುವ ಈ ಆ್ಯಕ್ಷನ್ ಥ್ರಿಲ್ಲರ್ ಸ್ಟೋರಿಗೆ ರಿತನ್ಯಾ ಅವ್ರೆ ನಾಯಕಿ. ಮರ್ದಿನಿ ಪೊಲೀಸ್ ಅಧಿಕಾರಿ ಆಗಿ, ದುಷ್ಟ ಸಂಹಾರ ಮಾಡೋಕೆ ಈ ನಾಯಕಿ ಹೊರಟಿದ್ದಾರೆ.
ಕಿರಣ್ ಕುಮಾರ್ ಅ್ಯಕ್ಷನ್ ಕಟ್ ಹೇಳುತ್ತಿರುವ ಮರ್ದಿನಿ ಸಿನೆಮಾದಲ್ಲಿ ಅನೇಕ ಯುವ ಪ್ರತಿಭಗಳಿಗೆ ಅವಕಾಶ ಕೊಟ್ಟಿದ್ದಾರೆ. ಹಾಗೆ ಆಯ್ಕೆಯಾಗಿರುವವರಿಗೆ ತರಬೇತಿ ಕೊಟ್ಟು ಸಿನೆಮಾದಲ್ಲಿ ನಟಿಸಲು ಚಾನ್ಸ್ ಕೊಟ್ಟಿದ್ದಾರೆ.
ಅಂದ್ಹಾಗೇ ರಿತನ್ಯಾಗೆ ಟಾಲಿವುಡ್ ಕಾಲಿವುಡ್ನಿಂದ ಸಿನೆಮಾಗಳಲ್ಲಿ ನಟಿಸುವ ಆಫರ್ ಸಿಕ್ಕಾಪಟ್ಟೆ ಬಂದಿದ್ದರೂ ಮೊದಲು ಸಿನೆಮಾ ಕನ್ನಡದಲ್ಲಿಯೇ ಮಾಡಬೇಕೆಂಬುವುದು ಈ ಹಾಸನ ಬೆಡಗಿಯ ಆಸೆ. ಯಾಕಂದ್ರೆ ಕನ್ನಡದ ಹುಡುಗಿಯಾಗಿ ಕನ್ನಡ ಸಿನೆಮಾಗಳಲ್ಲಿ ಮೊದಲು ನಟಿಸಿ ಇಲ್ಲಿಂದಲೇ ತನ್ನ ಕೆರಿಯರ್ ಶುರು ಮಾಡಬೇಕೆಂದು ರಿತನ್ಯಾ ಕನಸು. ಆದಷ್ಟು ಬೇಗ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಯಾವಾಗ್ಲು ಬೇಕು ಅಂತ ರಿತನ್ಯಾ ಕೇಳಿದ್ದಾರೆ.
Tags
ಸಿನಿಮಾ