ಹಾಸನ: ನಾಗಭೂಮಿ ವಿವಿದೋದ್ದೇಶ ಅಭಿವೃದ್ದಿ ಸಂಸ್ಥೆ, ಭಾರತೀಯ ದಲಿತ ಸಾಹಿತ್ಯ ವೇದಿಕೆ ಹಾಗೂ ವಿವಿಧ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 4ರಂದು ನಗರದ ಕಲಾಭವನದಲ್ಲಿ ನಡೆಯುವ 6ನೇ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಸೇವಕ ಜಿ.ಓ.ಮಹಂತಪ್ಪ ಅವರನ್ನು ಸಮ್ಮೇಳನÀ ಸಂಘಟಕರು ಭಾನುವಾರ ಅವರ ನಿವಾಸಕ್ಕೆ ತೆರಳಿ ದಂಪತಿಗಳನ್ನು ಗೌರವಿಸುವ ಮೂಲಕ ಅಧಿಕೃತವಾಗಿ ಆಹ್ವಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮ್ಮೇಳನಾಧ್ಯಕ್ಷರು ಪ್ರಸ್ತುತ ದಿನಗಳಲ್ಲಿ ಬುದ್ದ, ಬಸವ, ಅಂಬೇಡ್ಕರ್ ಅವರ ಆಶಯಗಳು ಜೀವನಕ್ಕೆ ಪೂರಕವಾಗಿದ್ದು ಅವುಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ಅಗತ್ಯವಿದೆ ಎಂದರು.
ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಸಾಹಿತ್ಯ ಸಮ್ಮೇಳನಗಳು ತುಂಬ ಸಹಕಾರಿಯಾಗಿದ್ದು, ಇಂತಹ ಸಮ್ಮೇಳನಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡುವ ಮೂಲಕ ಸಾಹಿತಿಗಳು, ಕವಿಗಳು, ಬರಹಗಾರರಿಗೆ ವೇದಿಕೆ ಕಲ್ಪಿಸುವುದು ಮುಖ್ಯ ಎಂದರು.
ಸAಘಟನಾತ್ಮಕ ಮನೋಭಾವ, ಸಮಾಜಸೇವೆ ಹಾಗೂ ಎಲ್ಲರೊಂದಿಗಿನ ಒಳನಾಟ ಗಮನಿಸಿ 6ನೇ ದಲಿತ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಆಯ್ಕೆಮಾಡಿರುವುದು ನನಗೆ ಇನ್ನು ಹೆಚ್ಚಿನ ಜವಾಬ್ದಾರಿವಹಿಸಿದಂತಾಗಿದೆ. ಆಯ್ಕೆ ಮಾಡಿರುರ ವಿವಿಧ ಸಂಘಟನೆಯ ಮುಖಂಡರಿಗೆ , ಸಾಹಿತ್ಯ ಸಂಘಟಕರಿಗೆ, ಸಂAಸ್ಥೆಯ ಎಲ್ಲರಿಗೂ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ದಲಿತ ದಲಿತ ಮುಖಂಡ ಕೃಷ್ಣದಾಸ್ ಮಾತನಾಡಿ,ಸಮಾಜಕ್ಕೆ ಮಹಂತಪ್ಪ ಅವರ ಕೊಡುಗೆ ಅಪಾರವಾಗಿದ್ದು ಇವರನ್ನು 6ನೇ ದಲಿತ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಮಯೋಚ್ಚಿತವಾಗಿದೆ.ನಾಗಭೂಮಿ ವಿವಿದೊಧ್ದೇಶ ಸಂಸ್ಥೆ ಸಮಾಜದಲ್ಲಿ ಎಲೆಮರೆಯಂತೆ ಸಮಾಜ ಸೇವೆ ಮಾಡಿರುವವರನ್ನು ಹಾಗೂ ದಲಿತ ಹೋರಾಟಗಾರರನ್ನು ಗುರುತಿಸುವ ಮೂಲಕ ಅವರ ಸೇವೆಗೆ ಗೌರವ ನೀಡುತ್ತಿರುವುದು ಅಭಿನಂದನಾರ್ಹ. ಸಮ್ಮೇಳನದ ಯಶಸ್ವಿಗೆ ವಿವಿಧ ದಲಿತ ಹಾಗೂ ಜನಪರ ಸಂಘಟನೆಗಳು ಕೈಜೋಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ನಾಗರಾಗರಾಜ್ ಹೆತ್ತೂರು, ದಲಿತ ಮುಖಂಡ ರ‍್ಪಿಐ ಸತೀಶ್, ಪತ್ರಕರ್ತರಾದÀ ಮಂಜುಬನವಾಸೆ, ಕೇಂದ್ರ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಸಾಹಿತಿ ಕೋಟ್ರೆಶ್ ಉಪ್ಪಾರ್,ಕಸಾಪ ಹಾಸನ ತಾಲ್ಲೂಕು ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲ, ಸಾಹಿತಿಗಳಾದ ನಾಗರಾಜ್ ದೊಡ್ಡಮನಿ,ಹೆಚ್.ಎಸ್.ಬಸವರಾಜ್, ಹೇಮರಾಗ, ಪತ್ರಕರ್ತ ವೆಂಕಟೇಶ್ ಬ್ಯಾಕರವಳ್ಳಿ, ಮುಖಂಡ ಸುನಿಲ್‌ಆಡುವಳ್ಳಿ, ಭವ್ಯನಾಗರಾಜ್, ಅಶ್ವತ್‌ನಾರಾಯಣ್,ಬಿ.ರಘು ಇನ್ನಿತರರು ಇದ್ದರು.
ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ತೊಟ್ಟಿಲು: ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ
ಐತಿಹಾಸಿಕವಾಗಿ ಭಾರತೀಯ ಹಾಗೂ ದಲಿತ ಸಂಸ್ಕೃತಿಯಲ್ಲಿ ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ತೊಟ್ಟಿಲಾಗಿದೆ ಎಂದು ಮೈಸೂರು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರಿಂದು ಹಾಸನಕ್ಕೆ ಆಗಮಿಸಿದ ವೇಳೆ ಸಮ್ಮೇಳನ ಆಹ್ವಾನ ಪತ್ರಿಕೆ ಸ್ವೀಕರಿಸಿ ಮಾತನಾಡಿ,ಸಾಹಿತ್ಯ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿರುವ ಜಾನಪದ ಹಾಗೂ ಬಂಡಾಯ ಸಾಹಿತ್ಯಗರೆಡು ಭಾರತೀಯ ಸಂಸ್ಕೃತಿಯ ಬೇರುಗಳಾಗಿವೆ ಎಂದರು. ಇಂತಹ ಐತಿಹಾಸಿಕ ಇರುವ ಹಾಸನದಲ್ಲಿ ದಲಿತ ಹಾಗೂ ಜನಪರ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಸಮ್ಮೇಳನಕ್ಕೆ ಎಲ್ಲರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಜಿ.ಓ ಮಹಂತಪ್ಪ, ಕೃಷ್ಣದಾಸ್, ನಾಗರಾಜ್‌ಹೆತ್ತೂರು, ರ‍್ಪಿಐ ಸತೀಶ್, ನಾಗರಾಜುಡೊಡ್ಡಿಮನಿ, ಗಂಜಲಗೂಡು ಗೋಪಾಲೇಗೌಡ, ವೆಂಕಟೇಶ್ ಬ್ಯಾಕರವಳ್ಳಿ,ಆಡುವಳ್ಳಿ ಸುನೀಲ್, ಭವ್ಯನಾಗರಾಜ್ ಇನ್ನಿತರರು ಇದ್ದರು.
