ಮಹಿಳಾ ದಿನಾಚರಣೆ ಕೊರೋನಾ ವಾರಿರ‍್ಸ್ ಸನ್ಮಾನ.

 ಹಾಸನ: ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದಿAದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಕೊರೋನಾ ವಾರಿರ‍್ಸ್ ಮೂವರಿಗೆ ಸನ್ಮಾನಿಸಿ ಗೌರವಿಸಲಾಯಿತು.


     ಮೊದಲು ದೀಪ ಬೆಳಗಿ, ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಸರಕಾರಿ ಆಸ್ಪತ್ರೆಯ ಫಿಜಿಸಿಯನ್ ಡಾ|| ಮುತ್ತುರಾಜ್, ಆಶಾ ಕಾರ್ಯಕರ್ತೆ ಮಂಜುಳ, ಸರಕಾರಿ ಶಾಲೆಯ ಶಿಕ್ಷಕಿ ಭಾರತೀ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. 

   ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಶೈಲಜಾ ಹಾಸನ್ ರವರು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆ ಎಂದರೇ ಮನೆ ಒಳಗೆ ಮಾತ್ರ ಕೆಲಸ ಮಾಡುವ ಕಾಲವೊಂದಿತ್ತು. ಪ್ರಸ್ತುತದಲ್ಲಿ ಆಕೆಯೂ ಕೂಡ ಶಿಕ್ಷಣ ಪಡೆದು ಇಂದು ಎಲ್ಲಾ ಕ್ಷೇತ್ರದಲ್ಲೂ ಕಾಲಿಡುವ ಮೂಲಕ ತನ್ನದೆಯಾದ ಹೆಸರನ್ನು ಮಾಡುವಲ್ಲಿ ಸಫಲವಾಗಿದ್ದಾಳೆ ಎಂದರು.

       ಮಹಿಳಾ ದಿನಾಚರಣೆ ಅಂಗವಾಗಿ ಸಂಘದ ಸದಸ್ಯರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ನಾಗಮ್ಮ ನಾರಾಯಣಗೌಡ, ಸಂಘದ ಪದಾಧಿಕಾರಿಗಳಾದ ರೇಖಾ ಮಂಜುನಾಥ್, ಯಶೋಧ, ವಿನೋದ್, ಗಾಯಿತ್ರಿ, ಪದ್ಮಾವತಿ ಇತರರು ಉಪಸ್ಥಿತರಿದ್ದರು.


Post a Comment

Previous Post Next Post